See also 2O  3O  4O
1O
ನಾಮವಾಚಕ

(o ಎಂದೂ ಪ್ರಯೋಗ) (ಬಹುವಚನ Os ಯಾ O’s)

  1. ಇಂಗ್ಲಿಷ್‍ ವರ್ಣಮಾಲೆಯ ಹದಿನೈದನೆಯ ಅಕ್ಷರ.
  2. (o) (ದೂರವಾಣಿ ಸಂಖ್ಯೆ ಮೊದಲಾದ ಸಂಖ್ಯಾಶ್ರೇಣಿಯಲ್ಲಿ, ಮುಖ್ಯವಾಗಿ ಮಾತನಾಡುವಾಗ) ಸೊನ್ನೆ; ಶೂನ್ಯ.
  3. O ವರ್ಗದ ರಕ್ತ; ABO ವ್ಯವಸ್ಥೆಯ ಮಾನವರಕ್ತದ ಗುಂಪುಗಳಲ್ಲೊಂದು.
  4. ‘o’ ಆಕಾರದ ಗುರುತು.
  5. ವರ್ತುಲ; ವೃತ್ತ; ಮುಖ್ಯವಾಗಿ ಗುಂಡಾದ ಆಕಾರ.
See also 1O  3O  4O
2O
ಸಂಕ್ಷಿಪ್ತ

(O. ಎಂದೂ ಪ್ರಯೋಗ) Old.

See also 1O  2O  4O
3O
ಸಂಕೇತ

(ರಸಾಯನವಿಜ್ಞಾನ) ಆಕ್ಸಿಜನ್‍ ಧಾತು.

See also 1O  2O  3O
4O
ಭಾವಸೂಚಕ ಅವ್ಯಯ
  1. 1oh ಎಂಬ ಪದದ ರೂಪಾಂತರ.
  2. (ಸಂಬೋಧನೆಯ ಹಿಂದೆ ಅಲ್ಪವಿರಾಮ ಚಿಹ್ನೆಯಿಂದ ಪ್ರತ್ಯೇಕಿಸದಾಗ o ರೂಪ, ಪ್ರತ್ಯೇಕಿಸಿದಾಗ oh ರೂಪ) ಓ! ಓಹೋ! ಅಯ್ಯೋ! ಅಬ್ಬ! O dear me! ಅಯ್ಯೋ ನನ್ನ ಪಾಡೇ, ಗೋಳೇ! O for a breathing-space! ಓ, ಉಸಿರಾಡಲು ಅವಕಾಶ ಸಿಕ್ಕಿದರೆ! Oh, what a lie ಅಬ್ಬ, ಎಂಥ ಸುಳ್ಳು! Oh, is that so? ಓಹೋ! ಹಾಗೋ? O God! ಅಯ್ಯೋ ದೇವರೆ!
    1. (O yes!) ಓ, ಆಗಲಿ! ಓಹೋ ಆಗಲಿ!
    2. = oyes.