IT
ಸಂಕ್ಷಿಪ್ತ

information technology.

See also 2it
1it ಇಟ್‍
ಸರ್ವನಾಮ

(ಷಷ್ಠೀ ವಿಭಕ್ತಿ its; ಬಹುವಚನ they, ದ್ವಿತೀಯಾ ವಿಭಕ್ತಿ them, ಷಷ್ಠೀ ವಿಭಕ್ತಿ their).

  1. ಅದು; ಇದು; ಪ್ರಸಕ್ತ ವಿಷಯ, ವಸ್ತು (ಕೆಲವೊಮ್ಮೆ ಲಿಂಗ ತಿಳಿಯದ ಯಾ ಲಿಂಗ ಅಭಿಪ್ರೇತವಾಗಿರದ ಪ್ರಾಣಿ ಯಾ ಮಗು): took a stone and threw it ಒಂದು ಕಲ್ಲು ತೆಗೆದುಕೊಂಡು ಅದನ್ನು ಎಸೆದ.
  2. ಪ್ರಸ್ತುತ ವ್ಯಕ್ತಿ: who is it that knocks? ಅದು ಯಾರು, ಬಾಗಿಲು ತಟ್ಟುವವನು? it is I (ಅದು) ನಾನು. is it a boy or a girl? ಅದು ಹುಡುಗನೋ, ಹುಡುಗಿಯೋ?
  3. (ಪ್ರಾಚೀನ ಪ್ರಯೋಗ, ಕಾವ್ಯಪ್ರಯೋಗ) ಮನಸ್ಸನ್ನು ವ್ಯಾಪಿಸಿರುವುದು, ತುಂಬಿರುವುದು: it is the miller’s daughter ಗಿರಣಿ ಮಾಲಿಕನ ಮಗಳು ನನ್ನ ಮನಸ್ಸನ್ನು ವ್ಯಾಪಿಸಿದ್ದಾಳೆ.
  4. ಭಾವವಾಚಕ ಕ್ರಿಯಾಪದಗಳ ಕರ್ತೃವಾಗಿ: it rains ಮಳೆ ಹೊಯ್ಯುತ್ತದೆ. it is cold ತಣ್ಣಗಿದೆ. it is winter (ಅದು, ಇದು) ಚಳಿಗಾಲ. it is 6 miles to the village ಹಳ್ಳಿಗೆ ಆರು ಮೈಲಿ (ದೂರ) ಆಗುತ್ತದೆ. it is Wednesday today ಇಂದು ಬುಧವಾರ. it says in the Bible ಬೈಬಲ್‍ ( – ಎಂದು) ಹೇಳುತ್ತದೆ. I would go if it were not for the expense ವೆಚ್ಚವಿಲ್ಲದಿದ್ದರೆ ನಾನು ಹೋಗುತ್ತಿದ್ದೆ.
  5. ಮುಂದೆ ಬರುವ ನಿಜವಾದ ಕರ್ತೃವನ್ನು ಪೂರ್ವಭಾವಿಯಾಗಿ ಸೂಚಿಸುವ ಗೌಣ ಕರ್ತೃವಾಗಿ: it is absurd talking (to talk) like that ಹಾಗೆ ಮಾತಾಡುವುದು ಅಸಂಗತ. it is incredible that he should refuse ಅವನು ನಿರಾಕರಿಸಿದನೆಂಬುದು ನಂಬಲು ಅಸಾಧ್ಯ.
  6. ( ಕ್ರಿಯಾವಿಶೇಷಣ ಆಖ್ಯಾತದಿಂದ ಪ್ರತ್ಯೇಕಗೊಂಡಿರುವ, that ಎಂಬ ಸಂಬಂಧಾವ್ಯಯದಿಂದ ಪ್ರಾರಂಭವಾಗಿ ಮುಂದೆ ಬರುವ ಕರ್ತೃವನ್ನು ಪೂರ್ವಭಾವಿಯಾಗಿ ಸೂಚಿಸುವ): it is seldom that he fails ಅವನು ತಪ್ಪಿಸಿಕೊಳ್ಳುವುದು ವಿರಳ.
  7. (that ಎಂಬ) ಸಂಬಂಧಾವ್ಯಯದಿಂದ ಪ್ರಾರಂಭವಾಗಿ ಮುಂದೆ ಬರುವ ಕರ್ಮಪದವನ್ನು ಪೂರ್ವಭಾವಿಯಾಗಿ ಸೂಚಿಸುವ ಪದವಾಗಿ: see to it that they obey ಅವರು ಪಾಲಿಸುವಂತೆ ನೋಡಿಕೊ. I take it that you agree ನೀನು ಸಮ್ಮತಿಸುತ್ತೀಯೆಂದು ನಾನು ಗ್ರಹಿಸುತ್ತೇನೆ.
  8. (ಸಂಬಂಧಸೂಚಕಕ್ಕೆ ಪೂರ್ವಗಾಮಿ ಪದವಾಗಿ): it was a purse that he dropped ಅವನು ಬೀಳಿಸಿದ್ದು ಒಂದು ಹಣದ ಚೀಲ.
  9. ( ಸಕರ್ಮಕ ಕ್ರಿಯಾಪದ ಯಾ ಅಕರ್ಮಕ ಕ್ರಿಯಾಪದದೊಡನೆ ಅನಿರ್ದೇಶಕ ಕರ್ಮಪದವಾಗಿ) face it out ಧೈರ್ಯದಿಂದ ಎದುರಿಸು. carry it with a high hand ದರ್ಪದಿಂದ ಸಾಧಿಸು. deuce take it ಅದು ಹಾಳಾಗಲಿ. run for it ತ್ವರೆ ಮಾಡು. lord it over him ಅವನ ಮೇಲೆ ಅಧಿಕಾರ ನಡೆಸು. cab it (ರೂಢಿಯಾಗಿ ಯಾ ನಿರ್ದಿಷ್ಟ ಸಂದರ್ಭದಲ್ಲಿ) ಕ್ಯಾಬ್‍ ಬಂಡಿಯಲ್ಲಿ ಹೋಗು. give it him (hot) ಬಿಸಿಮುಟ್ಟಿಸು. have done it ಅವಿವೇಕ ಮಾಡಿದೆ.
  10. (ಆಡುಮಾತು) ಸಾಧನೆ ಮೊದಲಾದವುಗಳ ತುತ್ತತುದಿ; ಶಿಖರ; ಪರಮಾವಧಿ: for barefaced lying you really are it ನಾಚಿಕೆಯಿಲ್ಲದೆ ಸುಳ್ಳು ಹೇಳುವುದರಲ್ಲಿ ನೀನು ನಿಜವಾಗಿ ನಿಸ್ಸೀಮ, ತುತ್ತತುದಿ ಮುಟ್ಟಿದ್ದೀಯೆ.
  11. (ಆಡುಮಾತು) ಲೈಂಗಿಕ ಆಕರ್ಷಣೆ ಯಾ ಸಂಭೋಗ.
  12. (ಮಕ್ಕಳ ಆಟಗಳಲ್ಲಿ) ಇತರರನ್ನು ಹಿಡಿಯಬೇಕಾದ ಆಟಗಾರ.
ಪದಗುಚ್ಛ
  1. that’s it
    1. ಬೇಕಾಗಿರುವುದು ಅದೇ.
    2. ಸಮಸ್ಯೆಯೇ ಅದು; ಸಮಸ್ಯೆ ಅದೇ.
    3. ಕೊನೆ; ಮುಕ್ತಾಯ.
  2. this is it (ಆಡುಮಾತು) ನಿರೀಕ್ಷಿಸಿದ ಘಟನೆ ಆಗುವುದರಲ್ಲಿದೆ, ಸನ್ನಿಹಿತವಾಗಿದೆ.
See also 1it
2it ಇಟ್‍
ನಾಮವಾಚಕ

(ಆಡುಮಾತು) ಇಟಲಿಯ ವರ್ಮೂತ್‍ ಮಧ್ಯ: gin and it ಜಿನ್‍ ಮತ್ತು ವರ್ಮೂತ್‍ ಮಧ್ಯ.