HEW
ಸಂಕ್ಷಿಪ್ತ

(ಅಮೆರಿಕನ್‍ ಪ್ರಯೋಗ) Department of Health, Education and Welfare.

hew ಹ್ಯೂ
ಕ್ರಿಯಾಪದ
(ಭೂತಕೃದಂತ hewn ಉಚ್ಚಾರಣೆ ಹ್ಯೂನ್‍, ಯಾ hewed).
ಸಕರ್ಮಕ ಕ್ರಿಯಾಪದ
  1. (ಕೊಡಲಿ, ಕತ್ತಿ, ಮೊದಲಾದವುಗಳಿಂದ ವಸ್ತುವನ್ನು) ಕಡಿ; ತುಂಡರಿಸು; ಛೇದಿಸು; ಕತ್ತರಿಸು; ಕಡಿದುಹಾಕು; ಉರುಳಿಸು; ಕೊಯ್ಯು; ತರಿ; ತರಿದುಹಾಕು; ಕೆಡಹು; ಖಂಡ ತುಂಡ ಮಾಡು.
  2. (ಮರದ ತುಂಡು ಮೊದಲಾದವನ್ನು) ಆಕಾರ ಬರುವಂತೆ – ಕೆತ್ತು, ಕೊಯ್ಯು, ಕತ್ತರಿಸು.
ಅಕರ್ಮಕ ಕ್ರಿಯಾಪದ
  1. ಕತ್ತರಿಸುವ ಹೊಡೆತಗಳನ್ನು ಹೊಡೆ, ಏಟುಗಳನ್ನು ಹಾಕು.
  2. (ಅಮೆರಿಕನ್‍ ಪ್ರಯೋಗ) ಹೊಂದಿಕೊ; ಅನುಗುಣವಾಗು.
ಪದಗುಚ್ಛ

hew one’s way ಕಡಿದುಹಾಕಿ ದಾರಿ ಮಾಡಿಕೊಂಡು ಮುಂದೆ ಸಾಗು.