HE
ಸಂಕ್ಷಿಪ್ತ
  1. His or Her excellency.
  2. His Eminence.
  3. high explosive.
He
ಸಂಕೇತ

(ರಸಾಯನವಿಜ್ಞಾನ) helium ಧಾತು.

See also 2he  3he
1he ಹಿ()
ಸರ್ವನಾಮ

(ದ್ವಿತೀಯಾ ವಿಭಕ್ತಿ him ಷಷ್ಠೀ ವಿಭಕ್ತಿ his, ಆತ್ಮಾರ್ಥಕ himself ಯಾ ಪ್ರಾಚೀನ ಪ್ರಯೋಗ him, ಬಹುವಚನ they, ದ್ವಿತೀಯಾ ವಿಭಕ್ತಿ them, ಷಷ್ಠೀ ವಿಭಕ್ತಿ their).

  1. (ಹಿಂದೆ ಹೇಳಿದ ಯಾ ಪ್ರಸ್ತಾಪಿಸಿದ ಹುಡುಗ ಯಾ ಪುರುಷನ ವಿಷಯದಲ್ಲಿ) ಅವನು ; ಆತ; ಇವನು; ಈತ.
  2. (ಹಿಂದೆ ಹೇಳಿದ ಯಾ ಪ್ರಸ್ತಾಪಿಸಿದ ಗಂಡು ಪ್ರಾಣಿಯ ವಿಷಯದಲ್ಲಿ) ಅದು; ಇದು.
  3. ಅವರು; ಅವನು; ಲಿಂಗ ನಿರ್ದೇಶನ ಮಾಡಿದ ವ್ಯಕ್ತಿ, ಮುಖ್ಯವಾಗಿ ಹಿಂದೆ ಈಗಾಗಲೇ ಹೆಸರಿಸಿದ ಯಾ ಗುರುತಿಸಿದ ವ್ಯಕ್ತಿ: if anyone comes he will have to wait ಯಾರಾದರೂ ಬಂದರೆ ಅವರು ಕಾಯಬೇಕಾಗುತ್ತದೆ.
See also 1he  3he
2he ಹಿ()
ನಾಮವಾಚಕ
  1. ಗಂಡು; ಗಂಡಸು; ಪುರುಷ: hes and shes ಗಂಡಸರು ಮತ್ತು ಹೆಂಗಸರು.
  2. ( ಸಮಾಸ ಪೂರ್ವಪದವಾಗಿ) ಗಂಡು: he-goat ಹೋತ.
See also 1he  2he
3he ಹಿ()
ಭಾವಸೂಚಕ ಅವ್ಯಯ

(ವಿನೋದ ಯಾ ಅವಹೇಳನಸೂಚಕವಾಗಿ) ಹೇ! (ಸಾಮಾನ್ಯವಾಗಿ ಪುನರುಕ್ತಿಯಲ್ಲಿ ಹೀ ಹೀ!).