George ಜಾರ್ಜ್‍
ನಾಮವಾಚಕ
  1. ಸಂತ ಜಾರ್ಜ್‍; ಮೂರನೆಯ ಎಡ್ವರ್ಡ್‍ ದೊರೆಯ ಕಾಲದಿಂದ ಇಂಗ್ಲೆಂಡಿನ ರಕ್ಷಕನೆಂದು ಭಾವಿಸಿರುವ ಸಂತ.
  2. ‘ಗಾರ್ಟರ್‍’ ಎಂಬ ಬಿರುದು ಲಾಂಛನದಲ್ಲಿರುವ ಆಭರಣ.
  3. (ಬ್ರಿಟಿಷ್‍ ಪ್ರಯೋಗ) (ಅಶಿಷ್ಟ) ವಿಮಾನದಲ್ಲಿಯ ಸ್ವಯಂಚಾಲಿತ ಚಾಲಕ.
ಪದಗುಚ್ಛ
  1. Brown George ಕಂದುಮಣ್ಣಿನ ಪಾತ್ರೆ.
  2. by george (ಆಣೆ ಇಟ್ಟುಕೊಳ್ಳುವಾಗ, ಯಾ ಆಶ್ಚರ್ಯವನ್ನೋ ಸಮ್ಮತವನ್ನೋ ಸೂಚಿಸುವ ಉದ್ಗಾರ) ಸಂತ ಜಾರ್ಜ್‍ನ ಆಣೆ!
  3. George Cross, Medal (ಸಂಕ್ಷಿಪ್ತ GC., GM.) ವಿಶಿಷ್ಟ ಸಾಹಸ ಸೇವೆಗಾಗಿ (ಮುಖ್ಯವಾಗಿ ಅಸೈನಿಕರಿಗೆ ಯಾ ನಾಗರಿಕರಿಗೆ) ಕೊಡುವ, 1940ರಲ್ಲಿ 6ನೇ ಜಾರ್ಜ್‍ ದೊರೆಯು ಇಂಗ್ಲೆಂಡಿನಲ್ಲಿ ಸ್ಥಾಪಿಸಿದ ಪದಕಗಳು.
  4. St. George’s Cross ಸಂತ ಜಾರ್ಜನ ಶಿಲುಬೆ; ಪಟ್ಟೆಗಳು ಕೇಂದ್ರದಲ್ಲಿ ಅಡ್ಡಹಾಯುವ ಕೆಂಪು ಬಣ್ಣದ ಶಿಲುಬೆ.
  5. St. George’s Day ಸಂತ ಜಾರ್ಜನ ದಿನ; ಏಪ್ರಿಲ್‍ 23ನೆಯ ತಾರೀಖು.