See also 2frank  3frank  4frank  5frank
1Frank ಹ್ರಾಂಕ್‍
ನಾಮವಾಚಕ
  1. ಹ್ರ್ಯಾಂಕ್‍; ಆರನೆಯ ಶತಮಾನದಲ್ಲಿ ಹ್ರಾನ್ಸ್‍ ದೇಶವನ್ನು ಜಯಿಸಿದ ಜರ್ಮನ್‍ ಜನಾಂಗದವನು ಯಾ ಸಂಯುಕ್ತ ಜರ್ಮನ್‍ ಜನಾಂಗದವನು.
  2. (ಪೂರ್ವ ಮೆಡಿಟರೇನಿಯನ್‍) ಪಾಶ್ಚಾತ್ಯ ಜನಾಂಗದವನು.
See also 1Frank  3frank  4frank  5frank
2frank ಹ್ರಾಂಕ್‍
ಗುಣವಾಚಕ
  1. ಸರಳ; ಅಮಾಯಿಕ; ಮುಗ್ಧ; ಭೋಳೆ (ಸ್ವಭಾವದ): a frank face ಅಮಾಯಿಕ ಮುಖ.
  2. ಮರೆಮಾಚದ; ಮುಚ್ಚುಮರೆಯಿಲ್ಲದ; ನೇರವಾದ; ಯಥಾರ್ಥವಾದ: a frank opinion ಮುಚ್ಚುಮರೆಯಿಲ್ಲದ, ನೇರ – ಅಭಿಪ್ರಾಯ.
  3. ಅಕೃತ್ರಿಮ; ಅಕುಟಿಲ; ನಿಷ್ಕಪಟ.
  4. ಸಾಚಾ; ಋಜು; ಪ್ರಾಮಾಣಿಕವಾದ; ಪ್ರಕಟವಾಗಿ ಹೇಳುವ.
  5. (ವೈದ್ಯಶಾಸ್ತ್ರ) ವಿಸ್ಪಷ್ಟ; ಸುವ್ಯಕ್ತ; ಸ್ಪಷ್ಟವಾಗಿ – ಕಾಣುವ, ತೋರುವ ವ್ಯಕ್ತವಾಗುವ; ಸಂದೇಹಕ್ಕೆಡೆಯಿಲ್ಲದ: frank pus, anaemia ಸ್ಪಷ್ಟವಾಗಿ ಕಾಣುವ ಕೀವು, ರಕ್ತಹೀನತೆ.
See also 1Frank  2frank  4frank  5frank
3frank ಹ್ರಾಂಕ್‍
ಸಕರ್ಮಕ ಕ್ರಿಯಾಪದ
  1. (ಚರಿತ್ರೆ) (ಕಾಗದ, ಪತ್ರ, ಮೊದಲಾದವನ್ನು ಹಾಸಲಿಲ್ಲದೆ ಅಂಚೆಯಲ್ಲಿ ಪುಕ್ಕಟೆ ರವಾನಿಸುವಂತೆ ಲಕೋಟೆಗಳ ಮೇಲೆ) ಬಿಡುತಿ ರುಜು, ಸಹಿ, ದಸ್ಕತ್ತು – ಹಾಕು; ರವಾನೆ ದಸ್ಕತ್ತು, ರುಜು – ಹಾಕು.
  2. (ಪ್ರಾಚೀನ ಪ್ರಯೋಗ) ಹೋಗಿಬರಲು ಅನುಕೂಲ ಮಾಡಿಕೊಡು.
  3. (ಪ್ರಾಚೀನ ಪ್ರಯೋಗ) (ವ್ಯಕ್ತಿಗೆ) ಸಮಾಜದ ಪ್ರತಿಷ್ಠಿತವರ್ಗಗಳವರೊಡನೆ ಓಡಾಡಲು ಅನುಕೂಲ ಮಾಡಿ ಕೊಡು.
  4. (ಚರಿತ್ರೆ) (ಒಬ್ಬನನ್ನು) ಬಾಡಿಗೆ ಇಲ್ಲದೆ (ಬಂಡಿಯಲ್ಲಿ) – ಪುಕ್ಕಟೆ ಒಯ್ಯು, ಕರೆದುಕೊಂಡು ಹೋಗು.
  5. (ಚರಿತ್ರೆ) (ಮುಂದೆ ಕೊಡಬೇಕಾದ) ತೆರಿಗೆ (ಮೊದಲಾದವುಗಳಿಂದ) ವಿನಾಯಿತಿ ನೀಡು, ಬಿಡುಗಡೆ ಮಾಡು.
  6. (ಹಾಸಲು ವೆಚ್ಚ ಸಂದಿದೆಯೆಂಬುದನ್ನು ದಾಖಲೆಮಾಡಲು ಕಾಗದಕ್ಕೆ) ಮುದ್ರೆ ಒತ್ತು; ಠಸ್ಸೆ ಹೊಡೆ: ಗುರುತು ಹಾಕು.
ಪದಗುಚ್ಛ

a franking duty ಸಾರಿಗೆ ಸುಂಕ; ಸಾಗಿಸಲು ಕೊಡಬೇಕಾದ ಸುಂಕ, ತೆರಿಗೆ.

See also 1Frank  2frank  3frank  5frank
4frank ಹ್ರಾಂಕ್‍
ನಾಮವಾಚಕ
  1. ರವಾನೆಯ ಸಹಿ, ರುಜು; ಬಿಡುತಿ – ದಸ್ಕತ್ತು ಯಾ ಗುರುತು.
  2. ಬಿಡುತಿರುಜು ಹಾಕಿದ ಯಾ ಠಸ್ಸೆ ಒತ್ತಿದ ಲಕೋಟೆ.
See also 1Frank  2frank  3frank  4frank
5frank ಹ್ರಾಂಕ್‍
ನಾಮವಾಚಕ

(ಅಮೆರಿಕನ್‍ ಪ್ರಯೋಗ, ಆಡುಮಾತು)= frankfurter.