Fascism ಹ್ಯಾಷಿಸಮ್‍
ನಾಮವಾಚಕ
  1. ಹ್ಯಾಷಿಸ್ಟ್‍ – ಪಂಥ, ತತ್ತ್ವ, ಸೂತ್ರ; ಮೊದಲನೆಯ ಮಹಾಯುದ್ಧ ಕಾಲದಲ್ಲಿ ಇಟಲಿಯಲ್ಲಿ ಕಮ್ಯುನಿಸ್ಟ್‍ತತ್ತ್ವಕ್ಕೆ ವಿರೋಧವಾಗಿ ರಾಷ್ಟ್ರೀಯ ಚಳುವಳಿಯಾಗಿ ಹುಟ್ಟಿ, ಮುಸೋಲಿನಿಯ ನೇತೃತ್ವದಲ್ಲಿ ಬೆಳೆದು ಸರ್ವಾಧಿಕಾರದಲ್ಲಿ ಪರ್ಯವಸಾನಗೊಂಡ ರಾಜಕೀಯ ಸೂತ್ರ, ಸಂವಿಧಾನಗಳು.
  2. ಇತರ ದೇಶಗಳಲ್ಲೂ ಅನುಕರಿಸಿದ ಹ್ಯಾಷಿಸ್ಟ್‍ ಬ್ಲಾಕ್‍ಷರ್ಟ್‍ ಚಳುವಳಿ ಸೂತ್ರ, ಪಂಥ, ತತ್ತ್ವ.
  3. ಹ್ಯಾಷಿಸಂ; ಉಗ್ರ ಬಲಪಂಥೀಯ, ಯಾ ನಿರಂಕುಶ ದೃಷ್ಟಿಯ ಪಂಥ ಯಾ ಪದ್ಧತಿ.