See also 2English  3English
1English ಇಂಗ್ಲಿಷ್‍
ಗುಣವಾಚಕ
  1. ಇಂಗ್ಲಂಡಿನ; ಅಂಗ್ರೇಜಿ; ಇಂಗ್ಲಂಡಿಗೆ ಸೇರಿದ; ಇಂಗ್ಲಂಡಿನಲ್ಲಿರುವ.
  2. ಇಂಗ್ಲಿಷರ; ಇಂಗ್ಲಂಡ್‍ ದೇಶದ ಜನ ಮೊದಲಾದವರ.
  3. ಇಂಗ್ಲಿಷಿನ; ಇಂಗ್ಲಿಷ್‍ ಭಾಷೆಯಲ್ಲಿ ಬರೆದ ಯಾ ಹೇಳಿದ.
See also 1English  3English
2English ಇಂಗ್ಲಿಷ್‍
ನಾಮವಾಚಕ
  1. ಇಂಗ್ಲಿಷು (ಭಾಷೆ); ಅಂಗ್ರೇಜಿ; ಆಂಗ್ಲಭಾಷೆ.
  2. ಒಂದು ಗೊತ್ತಾದ ಗಾತ್ರದ (14 ಪಾಯಿಂಟ್‍ನ) ಅಚ್ಚುಮೊಳೆ.
  3. (ಸಾಮೂಹಿಕವಾಗಿ) ಇಂಗ್ಲಿಷರು; ಇಂಗ್ಲಂಡಿನವರು; ಆಂಗ್ಲರು; ಇಂಗ್ಲಂಡ್‍ ದೇಶದವರು.
  4. (ಅಮೆರಿಕನ್‍ ಪ್ರಯೋಗ) (ಬಿಲ್ಯಡ್‍ ) ಭ್ರಮಣ; ಚೆಂಡಿನ ಮಧ್ಯಕ್ಕೆ ಹೊಡೆಯದೆ ಪಕ್ಕದಲ್ಲಿ ಹೊಡೆಯುವ ಮೂಲಕ ಅದು ತಿರುಗುವಂತೆ ಮಾಡುವುದು.
ಪದಗುಚ್ಛ
  1. Early English ಆರಂಭದ ಕಾಲದ ಇಂಗ್ಲಿಷು.
  2. Middle English (ಕ್ರಿಸ್ತಶಕ 1150 ರಿಂದ 1500ರವರೆಗಿನ) ನಡುಗಾಲದ ಯಾ ಮಧ್ಯಕಾಲದ ಇಂಗ್ಲಿಷು.
  3. Old English ಕ್ರಿಸ್ತಶಕ 1150ರ ವರೆಗಿನ ಹಳೆಯ ಇಂಗ್ಲಿಷು.
  4. the English (ಬಹುವಚನ) ಇಂಗ್ಲಿಷರು; ಆಂಗ್ಲರು.
  5. the Kings English ರಾಜ ಇಂಗ್ಲಿಷ್‍; ಶಿಷ್ಟ ಇಂಗ್ಲಿಷ್‍; ಸರಿಯಾಗಿ ಬರೆದ ಯಾ ಆಡಿದ ಇಂಗ್ಲಿಷ್‍ ಭಾಷೆ; ಇಂಗ್ಲಿಷ್‍ ಭಾಷೆಯ ಸಾಧು ರೂಪ, ಶುದ್ಧರೂಪ.
  6. the Queen’s English ರಾಣಿ ಇಂಗ್ಲಿಷ್‍; ಶಿಷ್ಟ ಇಂಗ್ಲಿಷ್‍ ಭಾಷೆಯ ಸರಿಯಾದ ರೂಪ: mishandle the Queen’s English ಇಂಗ್ಲಿಷನ್ನು ತಪ್ಪಾಗಿ ಬಳಸು, ಪ್ರಯೋಗಿಸು.
ನುಡಿಗಟ್ಟು

in plain english ಸ್ಪಷ್ಟವಾದ ಮಾತಿನಲ್ಲಿ.

See also 1English  2English
3English ಇಂಗ್ಲಿಷ್‍
ಸಕರ್ಮಕ ಕ್ರಿಯಾಪದ

(ಬ್ರಿಟಿಷ್‍ ಪ್ರಯೋಗ) (ಪ್ರಾಚೀನ ಪ್ರಯೋಗ ಯಾ ಪಂಡಿತಪ್ರಯೋಗ) ಇಂಗ್ಲಿಷ್‍ಗೆ ಭಾಷಾಂತರಿಸು.