See also 2-ory
1-ory -ಅರಿ
ಉತ್ತರಪ್ರತ್ಯಯ

ಮುಂದಿನ ಅರ್ಥಗಳನ್ನು ಸೂಚಿಸುವ ಪದಗಳನ್ನು ರಚಿಸಲು ಬಳಸುವ ಉತ್ತರಪ್ರತ್ಯಯ :

  1. (ನಾಮಪದಗಳಲ್ಲಿ) (ಯಾವುದೇ ಕೆಲಸ ನಡೆಯುವ) ಸ್ಥಳ, ಉದಾಹರಣೆಗೆ dormitory, laboratory ಕೆಲವು ಪಾರಿಭಾಷಿಕಗಳಲ್ಲಿ ಲ್ಯಾಟಿನ್‍ ಭಾಷೆಯ -orium ಉಳಿದಿದೆ. ಉದಾಹರಣೆಗೆ auditorium, crematorium.
  2. ( ಗುಣವಾಚಕಗಳಲ್ಲಿ) ಸಂಬಂಧಿಸಿದ; ಸಂಬಂಧಪಟ್ಟ ಎಂಬರ್ಥಗಳಲ್ಲಿ: compulsory, dispensatory, illusory, amatory, perfunctory (-ory ಎಂಬುದಕ್ಕೆ ಬದಲು ಕೆಲವೊಮ್ಮೆ -orial ಯಾ -orius ಪ್ರತ್ಯಯಗಳು ಬಳಕೆಯಲ್ಲಿವೆ).
See also 1-ory
2-ory -ಅರಿ
ಉತ್ತರಪ್ರತ್ಯಯ

ಕರ್ತೃಪದದ ಕ್ರಿಯೆಯನ್ನು ಸೂಚಿಸುವ ಗುಣವಾಚಕಗಳನ್ನು (ಒಮ್ಮೊಮ್ಮೆ ನಾಮವಾಚಕಗಳನ್ನು) ರಚಿಸುವಲ್ಲಿ ಬಳಸುವ ಉತ್ತರಪ್ರತ್ಯಯ : accessory, compulsory, directory.