-logy -ಲಜಿ
ಸಮಾಸ ಉತ್ತರ ಪದ

ಕೆಳಗಿನ ಅರ್ಥಗಳನ್ನು ಕೊಡುವ ನಾಮಪದಗಳನ್ನು ರೂಪಿಸುವಲ್ಲಿ ಬಳಕೆ:

  1. ಜ್ಞಾನದ ಯಾವುದೇ ಶಾಖೆ, ಅದರ ಸ್ವರೂಪ ಯಾ ಕಾರ್ಯಗಳನ್ನು ಸೂಚಿಸುವುದು: archaeology, zoology, biology, physiology.
  2. ಒಬ್ಬ ವ್ಯಕ್ತಿಯು ಆಡುವ ಮಾತಿನ ಸ್ವರೂಪ, ರೀತಿಗಳನ್ನು ಸೂಚಿಸುವುದು: tautology, brachylogy, eulogy.
  3. ‘ಕಥನ’ ಎಂಬ ಅರ್ಥ ಸೂಚಿಸುವುದು: trilogy, tetralogy.
  4. ಶಾಸ್ತ್ರವಿಷಯವನ್ನು ಕುರಿತಿರುವುದು, ನಿರೂಪಿಸುವುದು ಎಂಬುದನ್ನು ಸೂಚಿಸುವುದು: theology, astrology, genealogy, mineralogy, sociology, terminology.