-less -ಲಿಸ್‍
ಉತ್ತರಪ್ರತ್ಯಯ

ಗುಣವಾಚಕಗಳನ್ನು ಮತ್ತು ಕ್ರಿಯಾವಿಶೇಷಣಗಳನ್ನು ರೂಪಿಸುವ ನಿಷೇಧಾರ್ಥಕ ಉತ್ತರಪ್ರತ್ಯಯ.

  1. ( ನಾಮವಾಚಕಗಳಿಂದ ಗುಣವಾಚಕಗಳನ್ನು ರಚಿಸುವಲ್ಲಿ) ಇಲ್ಲದ, ವಿಮುಕ್ತ, ರಹಿತ, ಶೂನ್ಯ, ಹೀನ ಎಂಬ ಅರ್ಥಗಳಲ್ಲಿ ಬಳಕೆ: guileless, homeless.
  2. ( ಕ್ರಿಯಾಪದಗಳಿಂದ ಕ್ರಿಯಾವಿಶೇಷಣಗಳನ್ನು ರಚಿಸುವಲ್ಲಿ) ಇಲ್ಲದೆ, ವಿಮುಕ್ತವಾಗಿ, ರಹಿತವಾಗಿ, ಶೂನ್ಯವಾಗಿ ಎಂಬ ಅರ್ಥಗಳಲ್ಲಿ ಬಳಕೆ: doubtless, countless.
  3. (ನಾಮಪದವೂ ಅದರ ಸಜಾತೀಯ ಕ್ರಿಯಾಪದವೂ ಒಂದೇ ರೂಪ ಹೊಂದಿರುವ ಸಂದರ್ಭಗಳಲ್ಲಿ ಅಂತಹ ನಾಮಪದವನ್ನು ಅಂಶವಾಗಿ ಉಳ್ಳ ಸಂಯುಕ್ತಪದ ಯಾ ಸಮಾನಪದದ ಸಾದೃಶ್ಯದಿಂದ ರೂಪಿತವಾದ ಕ್ರಿಯಾಮೂಲವಾದ ಪದಗಳಲ್ಲಿ) ಮಾಡಲರಿಯದ, ಮಾಡಲಾರದ, ಅಶಕ್ತ, ಅಸಮರ್ಥ ಎಂಬ ಅರ್ಥಗಳಲ್ಲಿ ಬಳಕೆ: tireless, fathomless.