-ize -ಐಸ್‍
ಉತ್ತರಪ್ರತ್ಯಯ

ಈ ಮುಂದಿನ ಅರ್ಥಗಳನ್ನು ಸೂಚಿಸುವ ಕ್ರಿಯಾಪದಗಳನ್ನು ರಚಿಸಲು ಬಳಸುವ ಉತ್ತರಪ್ರತ್ಯಯ:

  1. ಹಾಗೆ, ಅಂತೆ, ಆ ರೀತಿ – ಮಾಡು ಯಾ ಆಗು: Americanize, dramatize, pulverize, realize.
  2. ಆ, ಅಂಥ ಪ್ರಕ್ರಿಯೆಗೆ ಒಳಪಡಿಸು: monopolize, pasteurize.
  3. (ಒಂದು) ನಿರ್ದಿಷ್ಟ ವ್ಯವಸ್ಥೆಯನ್ನು ಅನುಸರಿಸು: economize.
  4. (ಒಂದು) ನಿರ್ದಿಷ್ಟ ಭಾವ, ಭಾವನೆ ಹೊಂದಿರು: sympathize.
  5. ತುಂಬು, ಒದಗಿಸು ಯಾ (ಒಂದರ) ಪರಿಣಾಮಕ್ಕೆ, ಪ್ರಭಾವಕ್ಕೆ – ಗುರಿಮಾಡು, ಒಳಪಡಿಸು: oxidize.
  6. (ಒಂದರಲ್ಲಿ) ಇಡು; ಇರಿಸು: containerize, hospitalize.
  7. (ಒಂದರ ಗುಣಗಳಿರುವಂತೆ) ವರ್ತಿಸು ಯಾ ನಡೆದುಕೊ: criticize, deputize.
  8. (ನಿರ್ದಿಷ್ಟ ವ್ಯಕ್ತಿಯ) ಪ್ರಕ್ರಿಯೆಯನ್ನು ಅನುಸರಿಸು; ಅದರ ಪ್ರಕಾರ ಮಾಡು, ವರ್ತಿಸು: bowdlerize.