-ist -ಇಸ್ಟ್‍
ಉತ್ತರಪ್ರತ್ಯಯ

ಮುಂದಿನ ಅರ್ಥಗಳನ್ನು ಸೂಚಿಸುವ, ಪುರುಷವಾಚಕ ನಾಮಪದಗಳನ್ನು (ಕೆಲವು ಅರ್ಥಗಳಲ್ಲಿ ಸಂಬಂಧ ಗುಣವಾಚಕಗಳನ್ನು) ರೂಪಿಸಲು ಬಳಸುವ ಉತ್ತರಪ್ರತ್ಯಯ:

  1. ಯಾವುದೇ ಪದ್ಧತಿ ಮೊದಲಾದವುಗಳ ಅನುಯಾಯಿ: Marxist, fatalist.
  2. ಯಾವುದೇ ವೃತ್ತಿಯವ: pathologist, dentist.
  3. ಯಾವುದೇ ವಿಷಯ ಮೊದಲಾದವುಗಳಿಗೆ ಸಂಬಂಧಿಸಿದವ: tobacconist, copyist.
  4. ಒಂದು ವಸ್ತುವನ್ನು ಬಳಸುವವ: violinist, balloonist, motorist.
  5. -ize ಎಂಬ ಉತ್ತರಪ್ರತ್ಯಯದಿಂದ ಕೊನೆಗೊಳ್ಳುವ ಕ್ರಿಯಾಪದದಿಂದ ವ್ಯಕ್ತವಾಗುವುದನ್ನು ಮಾಡುವ ವ್ಯಕ್ತಿ: plagiarist, antagonist.
  6. ಯಾವುದೇ ಪೂರ್ವಗ್ರಹದ ಪರವಾದವನು ಯಾ ಯಾವುದೇ ಭೇದಭಾವವನ್ನು ಅನುಸರಿಸುವವ: racist, sexist.