-ism -ಇಸಮ್‍
ಉತ್ತರಪ್ರತ್ಯಯ

( ನಾಮವಾಚಕಗಳನ್ನು ರಚಿಸುವ ಪದ)

  1. ಒಂದು ಕ್ರಿಯೆ ಯಾ ಅದರ ಫಲಿತಾಂಶವನ್ನು ಸೂಚಿಸುವ ನಾಮವಾಚಕಗಳನ್ನು ರಚಿಸುವ ಉತ್ತರಪ್ರತ್ಯಯ: baptism, organism.
  2. ಒಂದು ವ್ಯವಸ್ಥೆ, ತತ್ತ್ವ ಯಾ ಸೈದ್ಧಾಂತಿಕ ಚಳಿವಳಿಯನ್ನು ಸೂಚಿಸುವ ನಾಮವಾಚಕಗಳನ್ನು ರಚಿಸುವ ಉತ್ತರಪ್ರತ್ಯಯ: conservatism, jingoism, feminism.
  3. ಒಂದು ಸ್ಥಿತಿ ಯಾ ಗುಣವನ್ನು ಸೂಚಿಸುವ ನಾಮವಾಚಕಗಳನ್ನು ರಚಿಸುವ ಉತ್ತರಪ್ರತ್ಯಯ: heroism, barbarism.
  4. ಪೂರ್ವಗ್ರಹದ ಯಾ ಪಕ್ಷಪಾತದ ಮೂಲವನ್ನು ಸೂಚಿಸುವ ನಾಮವಾಚಕಗಳನ್ನು ರಚಿಸುವ ಉತ್ತರಪ್ರತ್ಯಯ: racism, sexism.
  5. ಭಾಷಾವೈಲಕ್ಷಣ್ಯವನ್ನು ಸೂಚಿಸುವ ನಾಮವಾಚಕಗಳನ್ನು ರಚಿಸುವ ಉತ್ತರಪ್ರತ್ಯಯ: Americanism, Indianism, archaism.
  6. ರುಗ್ಣಾವಸ್ಥೆ ಯಾ ರೋಗ ಸ್ಥಿತಿಯನ್ನು ಸೂಚಿಸುವ ನಾಮವಾಚಕಗಳನ್ನು ರಚಿಸುವ ಉತ್ತರಪ್ರತ್ಯಯ: alcoholism, Parkinsonism.