-ide -ಐಡ್‍
ಉತ್ತರಪ್ರತ್ಯಯ

(ರಸಾಯನವಿಜ್ಞಾನ)

  1. ಒಂದು ಧಾತು ಇನ್ನೊಂದು ಧಾತುವಿನೊಡನೆ ಯಾ ಆಕ್ಸಿಜನ್‍ ರಹಿತ ರ್ಯಾಡಿಕಲ್‍ನೊಡನೆ ಸಂಯೋಗಗೊಂಡು ಉಂಟುಮಾಡುವ ಸರಳ ಸಂಯುಕ್ತಗಳಿಗೆ ಸೇರಿಸುವ ಉತ್ತರಪ್ರತ್ಯಯ. (ಹೆಚ್ಚು ವಿದ್ಯುದೃಣ ಧಾತು ಯಾ ರ್ಯಾಡಿಕಲ್‍ಗೆ ಹಚ್ಚುವುದು ವಾಡಿಕೆ): sodium chloride, potassium cyanide, calcium carbide.
  2. ಇತರ ಹಲವಾರು ಸಂಯುಕ್ತಗಳಿಗೆ ಸೇರಿಸುವ ಉತ್ತರಪ್ರತ್ಯಯ: amide, anhydride, peptide, saccharide.
  3. ಆವರ್ತಕೋಷ್ಟಕದ ಧಾತುಗಳು: actinide, lanthanide.