-ical -ಇಕಲ್‍
ಉತ್ತರಪ್ರತ್ಯಯ
  1. -ic ಅಂತ್ಯದ ನಾಮವಾಚಕ ಯಾ ಗುಣವಾಚಕಗಳಿಂದ ಗುಣವಾಚಕಗಳನ್ನು ರಚಿಸುವಾಗ ಬಳಸುವ ಉತ್ತರಪ್ರತ್ಯಯ: classical, musical, comical, economical, historical (ಕೆಲವು ಗುಣವಾಚಕಗಳ ಉತ್ಪತ್ತಿಯಲ್ಲಿ -ic ಮತ್ತು -ical ಎರಡೂ ರೂಪಗಳಿದ್ದು, ಎರಡು ವಿಭಿನ್ನ ಅರ್ಥಗಳನ್ನು ಪಡೆದಿರಬಹುದು, ಉದಾಹರಣೆಗೆ historic ಚರಿತ್ರಾರ್ಹ, ಇತಿಹಾಸಪ್ರಸಿದ್ಧ, historical ಚಾರಿತ್ರಿಕ, ಐತಿಹಾಸಿಕ, ಚರಿತ್ರೆಗೆ ಸಂಬಂಧಿಸಿದ).
  2. -y ಅಂತ್ಯದ ನಾಮವಾಚಕಗಳಿಂದ ಗುಣವಾಚಕಗಳನ್ನು ರಚಿಸುವಾಗ: pathological, theoretical, historical, mythological.