-i
ಉತ್ತರಪ್ರತ್ಯಯ
  1. -us ಅಂತ್ಯದ ಲ್ಯಾಟಿನ್‍ ಮೂಲದ ಮತ್ತು -e, -o ಅಂತ್ಯದ ಇಟ್ಯಾಲಿಯನ್‍ ಮೂಲದ ಇಂಗ್ಲಿಷ್‍ ಪದಗಳ ಬಹುವಚನ ಪ್ರತ್ಯಯವಾಗಿ ಬಳಸುವ ಉತ್ತರಪ್ರತ್ಯಯ: foci, dilettanti, timpani, literati.
  2. ಮಧ್ಯ ಪ್ರಾಚ್ಯದ ಯಾ ಅದರ ಹತ್ತಿರದ ಪ್ರದೇಶನಾಮಗಳು ಮೊದಲಾದವುಗಳಿಂದ ಗುಣವಾಚಕಗಳನ್ನು ರಚಿಸಲು ಬಳಸುವ ಉತ್ತರಪ್ರತ್ಯಯ: Israeli, Pakistani, Iraqi.