-fold -ಹೋಲ್ಡ್‍
ಉತ್ತರಪ್ರತ್ಯಯ
  1. ಸಲ; ಮಡಿ; ಬಾರಿ; ಪಟ್ಟು; ಒಂದು ನಿರ್ದಿಷ್ಟ ಸಂಖ್ಯೆಯಿಂದ ಗುಣಿಸಿದ, (ಇಷ್ಟರಿಂದ) ಗುಣಿಸಿದ ಮೊತ್ತದಷ್ಟು, ಇಷ್ಟೇ ಭಾಗಗಳಿರುವ, ಎಂಬರ್ಥಗಳ ಗುಣವಾಚಕ ಮತ್ತು ಕ್ರಿಯಾವಿಶೇಷಣಗಳನ್ನು ರೂಪಿಸುವಾಗ ಬಳಸುವ ಉತ್ತರಪ್ರತ್ಯಯ: twelvefold increase ಹನ್ನೆರಡು ಪಟ್ಟು ಹೆಚ್ಚಳ.
  2. -ಮುಖ; (ಅಷ್ಟು) ಮುಖ, ಸ್ತರ, ಯಾ ಭಾಗಗಳುಳ್ಳ: the threefold aspects of the problem ಆ ಸಮಸ್ಯೆಯ ಮೂರು ಮುಖಗಳು.