-ese -ಈಸ್‍
ಉತ್ತರಪ್ರತ್ಯಯ
  1. ಕೆಲವು ಗುಣವಾಚಕಗಳ ವ್ಯುತ್ಪತ್ತಿಯಲ್ಲಿ ಬಳಸುವ ಉತ್ತರಪ್ರತ್ಯಯ:
    1. ‘ಯಾವುದೋ ಪ್ರಾಂತದ, ಜನಾಂಗದ, ಊರಿನ, ದೇಶದ’ ಎನ್ನುವಾಗ: Japanese ಜಪಾನಿನ. Milanese ಮಿಲಾನಿನ.
    2. ‘ಯಾವುದೋ ಭಾಷೆಯ’ ಎನ್ನುವಾಗ: Portugese ಪೋರ್ಚುಗೀಸ್‍ ಭಾಷೆಯ.
  2. ಕೆಲವು ನಾಮವಾಚಕಗಳ ವ್ಯುತ್ಪತ್ತಿಯಲ್ಲಿ ಬಳಸುವ ಉತ್ತರಪ್ರತ್ಯಯ:
    1. ಪ್ರಾಂತದವನು, ವಿದೇಶದವನು, ಯಾ ನಗರದವನು ಎನ್ನುವಾಗ : Japanese ಜಪಾನೀಯ. Milanese ಮಿಲಾನ್‍ ನಗರದವನು.
    2. ದೇಶದ, ನಗರದ ಭಾಷೆ ಎನ್ನುವಾಗ: Japanese ಜಪಾನೀಭಾಷೆ. Viennese diagect ವಿಯೆನ ನಗರದ ಪ್ರಾಂತಭಾಷೆ.
  3. ‘ಯಾವನೋ ಸಾಹಿತಿಯ, ವಿಶಿಷ್ಟ ಬರಹದ, ಶೈಲಿಯ ಯಾ ಅದಕ್ಕೆ ಸಂಬಂಧಿಸಿದ’ ಎನ್ನುವಾಗ: Carlyles ಕಾರ್ಲೈಲನ ರೀತಿಯ, ಶೈಲಿಯ. journalese ಪತ್ರಿಕಾ ಶೈಲಿಯ.