-ery -ಅರಿ
ಉತ್ತರಪ್ರತ್ಯಯ

ಮುಂದೆ ಹೇಳುವ ಅರ್ಥಗಳನ್ನುಳ್ಳ ಪದಗಳನ್ನು ರಚಿಸುವಾಗ ಬಳಸುವ ಉತ್ತರಪ್ರತ್ಯಯ:

  1. ಸರಕುಗಳು; ಒಂದು ವರ್ಗದ ಸಾಮಾನುಗಳು: drapery.
  2. ಒಂದು ವರ್ಗಕ್ಕೆ ಸೇರಿಸಿದ ವಸ್ತುಗಳು: greenery, machinery.
  3. (ಜನಗಳ) ಗುಂಪು; ವರ್ಗ; ಸಮೂಹ: citizenry.
  4. ಬಳಕೆ ಯಾ ಸ್ಥಿತಿ: archery, dupery.
  5. ಕೆಲಸ, ವ್ಯವಸಾಯ, ತಳಿಯ ಅಭಿವೃದ್ಧಿ — ಇವುಗಳ, (ಅಮೆರಿಕನ್‍ ಪ್ರಯೋಗ) ಇವು ದೊರೆಯುವ ಸ್ಥಳ: brewery, vinery, piggery.
  6. ವರ್ತನೆ; ನಡತೆ: foolery, mimicry.
  7. (ಹೆಚ್ಚಾಗಿ ತುಚ್ಛವಾಗಿ) ಸಂಬಂಧಪಟ್ಟ ಎಲ್ಲವೂ; ತತ್ಸಂಬಂಧಿ: popery, Whiggery.
  8. (ವಸ್ತುಗಳ ವಿಷಯದಲ್ಲಿ) ಆ ಬಗೆಯ; ಆ ರೂಪದ; ಆ ಗುಣದ; ಆ ಸ್ವಭಾವದ.