See also 2-ed
1-ed -ಅಡ್‍, -ಇಡ್‍
ಉತ್ತರಪ್ರತ್ಯಯ

ದುರ್ಬಲ ಕ್ರಿಯಾಪದಗಳ ಭೂತಕೃದಂತಗಳಿಂದ ಈ ಅರ್ಥಗಳ ಗುಣವಾಚಕಗಳನ್ನು ರಚಿಸುವ ಉತ್ತರಪ್ರತ್ಯಯ:

  1. ಕ್ರಿಯೆಗೆ ಒಳಗಾಗಿರುವ: cooked.
  2. ಕ್ರಿಯೆಯನ್ನು ಮಾಡಿರುವ: escaped prisoner.
  3. ಕ್ರಿಯೆಯನ್ನು ಹೇಳಿರುವ ರೀತಿಯಲ್ಲಿ ರೂಢಿಯಿಂದ ಮಾಡುವ: well-behaved.
  4. ಕ್ರಿಯೆಗೆ ಒಳಗಾಗಿದೆ ಎಂಬುದನ್ನು ಸೂಚಿಸುವ: pained look.
See also 1-ed
2-ed -ಅಡ್‍, -ಇಡ್‍
ಉತ್ತರಪ್ರತ್ಯಯ
  1. ನಾಮವಾಚಕದಿಂದ ಈ ಅರ್ಥಗಳ ಗುಣವಾಚಕಗಳನ್ನು ರಚಿಸಲು ಬಳಸುವ ಉತ್ತರಪ್ರತ್ಯಯ:
    1. ಉಳ್ಳ, ಯುಕ್ತ, ಧರಿಸಿರುವ, ತಗುಲಿದ, ಮೊದಲಾದ ಅರ್ಥಗಳಲ್ಲಿ: talented ಪ್ರತಿಭೆಯುಳ್ಳ. clothed ಬಟ್ಟೆ ಧರಿಸಿರುವ. diseased ರೋಗ ತಗುಲಿರುವ.
    2. ಲಕ್ಷಣವುಳ್ಳ; ವರ್ತನೆಯುಳ್ಳ; ರೂಢಿಯುಳ್ಳ: bigoted ಮತಾಂಧ.
  2. ಗುಣವಾಚಕ ಮತ್ತು ನಾಮವಾಚಕಗಳ ಸಮಾಸದಿಂದ ಗುಣವಾಚಕ ರಚಿಸುವಲ್ಲಿ: quick-witted ಚುರುಕು ಬುದ್ಧಿಯ. three-cornered ಮುಮ್ಮೂಲೆಯ.