-age -ಇಜ್‍
ಉತ್ತರಪ್ರತ್ಯಯ
  1. ಮೊತ್ತ, ಸಮಷ್ಟಿ, ಒಟ್ಟು ಎಂಬರ್ಥಗಳಲ್ಲಿ: acreage ಎಕರೆಗಳು. cordage ಮಿಣಿಗಳು; ಹಗ್ಗ, ಹುರಿ.
  2. ಕ್ರಿಯೆ, ಕಾರ್ಯ, ಕಾರ್ಯಗತಿ ಎಂಬರ್ಥಗಳಲ್ಲಿ: stoppage ನಿಲ್ಲಿಸುವಿಕೆ; ತಡೆಯುವಿಕೆ; ಮುಚ್ಚುವಿಕೆ. breakage ಒಡೆತ; ಚೂರಾಗುವಿಕೆ.
  3. ಅಳತೆ; ಮೊತ್ತ; ಲೆಕ್ಕ; ಮುಖ್ಯವಾಗಿ ಪರಿಮಾಣ, ದರ ಎಂಬರ್ಥಗಳಲ್ಲಿ: dosage ಔಷಧದ ಪರಿಮಾಣ. leakage ಸೋರಲು; ಜಿನುಗು.
  4. ವಸತಿ, ಗೃಹ, ಆಲಯ ಎಂಬರ್ಥಗಳಲ್ಲಿ: orphanage ಅನಾಥಾಲಯ.
  5. ಸ್ಥಿತಿ, ಅವಸ್ಥೆ ಎಂಬರ್ಥಗಳಲ್ಲಿ: bondage ದಾಸ್ಯ.
  6. (ಬಳಸಲು ತೆರಬೇಕಾದ) ರುಸುಮು, ಶುಲ್ಕ, ಫೀಜು, ಹಾಸಲು ಎಂಬರ್ಥಗಳಲ್ಲಿ: postage ಅಂಚೆ–ರುಸುಮು, ವೆಚ್ಚ; ಹಾಸಲು.
  7. (ಕಾರ್ಯದ) ಪರಿಣಾಮ, ಫಲ ಎಂಬರ್ಥಗಳಲ್ಲಿ: wreckage ಭಗ್ನಾವಶೇಷ; ಒಡೆದುದರ ಫಲ.