See also 2surname
1surname ಸರ್ನೇಮ್‍
ನಾಮವಾಚಕ
  1. (ಅಂಕಿತನಾಮ ಯಾ ಇಟ್ಟ ಹೆಸರು ಅಲ್ಲದ) ಕುಲನಾಮ; ವಂಶನಾಮ; ಮನೆತನದ ಹೆಸರು; ಮನೆತನದವರಿಗೆಲ್ಲ ವಂಶಪಾರಂಪರ್ಯವಾಗಿ ಬರುವ ಸಾಮಾನ್ಯ ಹೆಸರು.
  2. (ರೋಮನ್‍ ಪ್ರಾಚೀನ ಚರಿತ್ರೆ) = cognomen(3).
  3. (ಪ್ರಾಚೀನ ಪ್ರಯೋಗ) (ವ್ಯಕ್ತಿಯ ಹುಟ್ಟಿದ ಊರು, ಕಸಬಉ, ಸಾಧನೆ, ಮೊದಲಾದವುಗಳನ್ನು ಸೂಚಿಸುವ ವರ್ಣನಾತ್ಮಕವಾದ, ಕೆಲವೊಮ್ಮೆ ವಂಶಪಾರಂಪರ್ಯವಾಗಿ ಮುಂದುವರೆಯುವ) ಉಪನಾಮ.