street ಸ್ಟ್ರೀಟ್‍
ನಾಮವಾಚಕ
  1. (ಹಳ್ಳಿಯ ಯಾ ಪಟ್ಟಣದ) ಬೀದಿ; ರಸ್ತೆ; ಹಾದಿ; ಮಾರ್ಗ: go down the street ಬೀದಿಯಲ್ಲಿ ಕೆಳಕ್ಕೆ, ಕೆಳದಿಕ್ಕಿಗೆ ಹೋಗು. across the street ಬೀದಿಯ ಆಚೆ ಕಡೆ, ಆ ಪಕ್ಕ, ಎದುರು – ಕಡೆ, ಪಕ್ಕ. he lives in the next street ಅವನು ಪಕ್ಕದ ಬೀದಿಯಲ್ಲಿ ವಾಸಿಸುತ್ತಿದ್ದಾನೆ. the window looks on the street ಆ ಕಿಟಕಿ ರಸ್ತೆ ಕಾಣುವಂತೆ ಮೇಲ್ಭಾಗದಲ್ಲಿದೆ. in college street ಕಾಲೇಜಿನ ರಸ್ತೆಯಲ್ಲಿ; ಕಾಲೇಜಿರುವ ಯಾ ಕಾಲೇಜಿಗೆ ಹೋಗುವ ರಸ್ತೆಯಲ್ಲಿ.
  2. ಒಂದೇ ಬೀದಿಯವರು; ಒಂದೇ ಬೀದಿಯಲ್ಲಿ ವಾಸಿಸುವವರು ಯಾ ಕೆಲಸ ಮಾಡುವವರು.
ಪದಗುಚ್ಛ
  1. in the street
    1. ಬೀದಿಯಲ್ಲಿ; ರಸ್ತೆಯಲ್ಲಿ; ಮನೆಯ ಹೊರಗೆ.
    2. (ಸ್ಟಾಕ್‍ ಎಕ್ಸ್‍ಚೇಂಜ್‍ ವ್ಯವಹಾರದ ವಿಷಯದಲ್ಲಿ) ವ್ಯಾಪಾರದ ವೇಳೆಯ, ವಹಿವಾಟಿನ ನಂತರ ನಡೆಸಿದ; ಮಾಡಿದ.
  2. not in the same street with (ಆಡುಮಾತು) (ಶಕ್ತಿ ಸಾಮರ್ಥ್ಯ ಮೊದಲಾದವುಗಳಲ್ಲಿ) ಒಬ್ಬನಿಗೆ ಸಮಾನನಲ್ಲದ; ಒಬ್ಬನಿಗಿಂತ ತೀರ ಕೀಳಾದ.
  3. on the streets
    1. ಬೀದಿಬಸವಿಯಾಗಿ ಬದುಕುವ; ವೇಶ್ಯಾವೃತ್ತಿಯಿಂದ, ಸೂಳೆಗಾರಿಕೆಯಿಂದ – ಹೊಟ್ಟೆ ಹೊರೆಯುವ.
    2. ಮನೆಯಿಲ್ಲದ; ನೆಲೆಯಿಲ್ಲದ.
  4. streets ahead (of) (ಆಡುಮಾತು) (ಒಬ್ಬನಿಗಿಂತ, ಒಂದಕ್ಕಿಂತ) ತೀರ ಮೇಲ್ಮಟ್ಟದ; ತುಂಬ ಮೇಲ್ಡರ್ಜೆಯ.
  5. up (or right up) one’s
    1. (ಆಡುಮಾತು) ಪರಿಚಿತವಾದ; ಗೊತ್ತಿರುವ.
    2. (ಆಡುಮಾತು) ಒಪ್ಪಬಹುದಾದ; ಅಂಗೀಕಾರಾರ್ಹ; ಸ್ವೀಕಾರಾರ್ಹ; ಒಬ್ಬನ ಜ್ಞಾನ, ಆಸಕ್ತಿ ಯಾ ಕಾರ್ಯಕ್ಷಮತೆಯ ಒಳಗೆ, ವ್ಯಾಪ್ತಿಯಲ್ಲಿ ಇರುವ.
    3. ಒಬ್ಬನ ಇಷ್ಟದಂತೆ; ಒಬ್ಬನಿಗೆ ಹಿಡಿಸುವಂತೆ.