See also 1straight  2straight
3straight ಸ್ಟ್ರೇಟ್‍
ಕ್ರಿಯಾವಿಶೇಷಣ
  1. ನೇರವಾಗಿ; ಸೀದಾ; ಅತ್ತಿತ್ತ ಸುಳಿಯದೆ: comes straight from Delhi ದೆಹಲಿಯಿಂದ ಸೀದಾ ಬರುತ್ತಾನೆ.
  2. ನೇರವಾಗಿ; ಹಿಂಜರಿಯದೆ ಯಾ ಸುತ್ತಿ ಬಳಸದೆ: I told him straight (or out) ನಾನು ಅವನಿಗೆ ನೇರವಾಗಿ ಹೇಳಿಬಿಟ್ಟೆ.
  3. ನೇರವಾಗಿ; ಸರಿಯಾದ ದಿಕ್ಕಿನಲ್ಲಿ; ಸರಿಯಾಗಿ ಗುರಿಯಿಟ್ಟು; ಕುರಿತೇಟಾಗಿ; ಗುರಿಗೆ ಸರಿಯಾಗಿ: shoot straight ನೇರವಾಗಿ ಗುಂಡು ಯಾ ಬಾಣ ಹೊಡೆ.
  4. ನೇರವಾಗಿ; ಸರಿಯಾಗಿ; ತಪ್ಪಿಲ್ಲದೆ: he does not see straight ಅವನು ನೇರವಾಗಿ, ಸರಿಯಾಗಿ – ನೋಡುವುದಿಲ್ಲ.
  5. (ಪ್ರಾಚೀನ ಪ್ರಯೋಗ) ಕೂಡಲೇ; ತತ್‍ಕ್ಷಣವೇ; ಒಡನೆಯೇ; ತಡವಿಲ್ಲದೆ.
ಪದಗುಚ್ಛ
  1. go straight
    1. ನೇರವಾಗಿ ಹೋಗು, ಸಾಗು.
    2. (ರೂಪಕವಾಗಿ) ನೆಟ್ಟಗಾಗು; ಸರಿಹೋಗು; (ಅಪರಾಧ ಯಾ ದುಷ್ಕೃತ್ಯ ನಡೆಸಿದ ತರುವಾಯ) ಪ್ರಾಮಾಣಿಕನಾಗಿರು; ಸನ್ಮಾರ್ಗದಲ್ಲಿ ನಡೆ; ಮತ್ತೆ ಅಪ್ರಾಮಾಣಿಕ ಯಾ ಅಪರಾಧಿ ಆಗದಿರು.
  2. straight away = 3straight\((5)\).
  3. straight from the 1shoulder.
  4. straight off (ಆಡುಮಾತು) (ನಿಧಾನವಾಗಿ ಯೋಚಿಸುವುದು, ಹಿಂದುಮುಂದು ನೋಡುವುದು, ಮೊದಲಾದವುಗಳಲ್ಲಿ ಕಾಲ ಕಳೆಯದೆ) ನೇರವಾಗಿ; ತಟಕ್ಕನೆ; ಒಡನೆಯೆ; ಥಟ್ಟನೆ; ಕೂಡಲೇ: cannot tell you straight off ಕೂಡಲೇ ನಿನಗೆ ಹೇಳಲಾರೆ.