squad ಸ್ಕ್ವಾಡ್‍
ನಾಮವಾಚಕ
  1. (ಸೈನಿಕ) ಸೈನ್ಯದ ತುಕಡಿ; ಕವಾಯತು ಮೊದಲಾದವುಗಳಿಗಾಗಿ ಸೇರಿಸಿದ ಸಣ್ಣ ತಂಡ, ದಳ.
  2. ತಂಡ; ಪಂಗಡ; ದಳ; ತುಕಡಿ:
    1. ಕೆಲಸ ಮೊದಲಾದವುಗಳಲ್ಲಿ ಭಾಗಿಗಳಾದ ಜನರ ಸಣ್ಣ ಗುಂಪು.
    2. ಒಂದು ತಂಡವಾಗಿ ಆಡುತ್ತಿರುವ ಆಟಗಾರರ ಗುಂಪು: a football squad ಕಾಲ್ಚೆಂಡಾಟಗಾರರ ತಂಡ.
    3. (ಅನೇಕ ವೇಳೆ ಸಂಯುಕ್ತಪದಗಳಲ್ಲಿ) ಪೊಲೀಸ್‍ ಇಲಾಖೆಯ ವಿಶಿಷ್ಟ ಕಾರ್ಯಾಚರಣೆಯ ಗುಂಪು: drug squad ಮಾದಕ ವಸ್ತುಗಳ ಪತ್ತೆದಳ.
    4. = flying squad.
    5. ವಿಶಿಷ್ಟ ಬಗೆಯ ಜನಗಳ ವರ್ಗ ಯಾ ತಂಡ: awkward squad ಅಪಕ್ವ ದಳ; ಕಚ್ಚಾ ತಂಡ; ಇನ್ನೂ ಸರಿಯಾಗಿ ತರಬೇತು ಪಡೆದಿರದ (ಮುಖ್ಯವಾಗಿ ಸೈನಿಕರ) ಗುಂಪು (ರೂಪಕವಾಗಿ ಸಹ).