See also 2sphere
1sphere ಸಿಅರ್‍
ನಾಮವಾಚಕ
  1. ಗೋಲ:
    1. ಮೇಲ್ಮೆ ಯಲ್ಲಿನ ಪ್ರತಿಯೊಂದು ಬಿಂದುವೂ ಕೇಂದ್ರದಿಂದ ಸಮ ದೂರದಲ್ಲಿರುವಂಥ ಘನಾಕೃತಿ.
    2. ಅದರ ಮೇಲ್ಮೈ.
    3. ಸಮಾಂತರ ಗೋಲ; ವಿಷುವದ್‍ ವೃತ್ತವು ಕ್ಷಿತಿಜಕ್ಕೆ ಸಮಾಂತರವಾಗಿರುವಂಥ ಸ್ಥಳದಲ್ಲಿ ಕಾಣಿಸುವ ಖಗೋಳ: right sphere ಲಂಬಗೋಲ; ವಿಷುವದ್‍ ವೃತ್ತವು ಕ್ಷಿತಿಜಕ್ಕೆ ಲಂಬವಾಗಿರುವಂಥ ಸ್ಥಳದಲ್ಲಿ ಕಾಣಿಸುವ ಖಗೋಳ.
  2. ಗೋಲಾಕೃತಿಯ ವಸ್ತು; ಚೆಂಡು ಮೊದಲಾದವು.
  3. ಯಾವುದೇ ಆಕಾಶಕಾಯ.
  4. ಗ್ಲೋಬಉ; ಗೋಳ; ಭೂಮಿಯನ್ನು ಸಂಕೇತಿಸುವ ಗೋಲಾಕೃತಿ.
  5. (ಕಾವ್ಯಪ್ರಯೋಗ) ಬಾನು; ಆಕಾಶ; ನಭೋಮಂಡಲ; ಗಗನ.
  6. ಸಮಾಂತರ ಗೋಲ; ಆಕಾಶಕಾಯಗಳು ನೆಲಸಿರುವವೆಂದು ಭಾವಿಸಲಾಗಿರುವ ಕಮಾನಿನಾಕಾರದ ಆಕಾಶತಲ; ಖಗೋಳ; ವಿಷುವದ್‍ ವೃತ್ತವು ಕ್ಷಿತಿಜಕ್ಕೆ ಸಮಾಂತರವಾಗಿರುವಂಥ ಸ್ಥಳದಲ್ಲಿ ಕಾಣಿಸುವ ಖಗೋಲ.
  7. (ಚರಿತ್ರೆ) ಆಕಾಶ ಗೋಲ; ಆಕಾಶಕಾಯಗಳನ್ನು ನಿಯತವಾದ ಸಂಬಂಧದಲ್ಲಿ ಸ್ಥಾಪಿಸಿದೆಯೆಂದು ಭಾವಿತವಾಗಿದ್ದ, ಒಂದರೊಳಗೆ ಇನ್ನೊಂದು ಇರುವಂತೆ ರಚಿತವಾಗಿದ್ದ ಮತ್ತು ಚಕ್ರದಂತೆ ಸದಾ ಸುತ್ತುತ್ತಿದ್ದ ವರ್ತುಲಕೋಶಗಳ ತಂಡದಲ್ಲೊಂದು.
  8. ಕಾರ್ಯದ, ಪ್ರಭಾವದ ಯಾ ಅಸ್ತಿತ್ವದ – ರಂಗ; ಕ್ಷೇತ್ರ: have done much within their own sphere ತಮ್ಮದೇ ಕ್ಷೇತ್ರದಲ್ಲಿ ಬಹಳಷ್ಟು ಮಾಡಿದ್ದಾರೆ, ಸಾಧಿಸಿದ್ದಾರೆ.
  9. (ಸಾಮಾನ್ಯವಾಗಿ ನಿರ್ದಿಷ್ಟ) ಸಾಮಾಜಿಕ – ಶ್ರೇಣಿ, ಸ್ತರ ಯಾ ವರ್ಗ: moves in quite another sphere ಬೇರೊಂದು ವರ್ಗದವರೊಡನೆ ಓಡಾಡುತ್ತಾನೆ.
ಪದಗುಚ್ಛ
  1. music (or harmony) of the spheres ಗೋಲಗಾನ; ಭೂಕೇಂದ್ರ ಸಿದ್ಧಾಂತವನ್ನು ನಂಬಿದ್ದವರ ಪ್ರಕಾರ ಯಾವ ಪಾರದರ್ಶಕ ಗೋಲಗಳಿಗೆ ಖಗೋಳ ಕಾಯಗಳು (ಮುಖ್ಯವಾಗಿ ಗ್ರಹಗಳು) ಅಂಟಿಕೊಂಡಿವೆ ಎಂದು ಭಾವಿಸಲಾಗಿತ್ತೋ ಆ ಗೋಲಗಳ ಚಲನೆಯಿಂದ ಹೊಮ್ಮುವುದೆಂದು ನಂಬಲಾಗಿದ್ದ ಗಾನ.
  2. oblique sphere ಓರೆಗೋಳ; ಕ್ಷಿತಿಜವು ಖಾಗೋಳಿಕ ವಿಷುವದ್ರೇಖೆಗೆ ಓರೆಯಾಗಿರುವ ಸ್ಥಳದಲ್ಲಿ ಕಾಣಸಿಕ್ಕುವ ಖಗೋಳ.
  3. parallel sphere ಸಮಾಂತರ ಗೋಳ; ಕ್ಷಿತಿಜಕ್ಕೂ ಖಾಗೋಳಿಕ ವಿಷುವದ್ರೇಖೆಗೂ ನಡುವೆ ಇರುವ ಕೋನ ಸೊನ್ನೆಯಾಗಿರುವ ಸ್ಥಳದಲ್ಲಿ ಕಾಣಸಿಗುವ ಖಗೋಳ.
  4. right sphere ಲಂಬಗೋಳ; ಕ್ಷಿತಿಜವು ಖಾಗೋಳಿಕ ವಿಷುವದ್ರೇಖೆಗೆ ಲಂಬವಾಗಿರುವ ಸ್ಥಳದಲ್ಲಿ ಕಾಣಸಿಗುವ ಖಗೋಳ.
  5. sphere of influence (ರಾಜ್ಯ, ವ್ಯಕ್ತಿ, ಮೊದಲಾದವರ) ಪ್ರಭಾವ ಕ್ಷೇತ್ರ.