solicitor ಸಲಿಸಿಟರ್‍
ನಾಮವಾಚಕ
  1. ಕೋರುಗ; ಯಾಚಕ; ಮನವಿದಾರ; (ಉಪಕಾರ ಮೊದಲಾದವನ್ನು ಒತ್ತಾಯವಾಗಿ) ಕೋರುವವನು.
  2. (ಬ್ರಿಟಿಷ್‍ ಪ್ರಯೋಗ) ಸಾಲಿಸಿಟರ್‍; ಸಲಹಾ ವಕೀಲ; ಕಕ್ಷಿದಾರರಿಗೆ ಸಲಹೆ ಕೊಡಲು, ಬ್ಯಾರಿಸ್ಟರುಗಳಿಗೆ ಮೊಕದ್ದಮೆಯ ಬಗ್ಗೆ ಮಾಹಿತಿ ಹಾಗೂ ಸೂಚನೆಗಳನ್ನು ಕೊಡಲು ಅರ್ಹತೆಯುಳ್ಳ, ಆದರೆ ತಾನೇ ಮೊಕದ್ದಮೆಯನ್ನು (ಕೆಲವು ಕೆಳ ಕೋರ್ಟುಗಳಲ್ಲಿ ಹೊರತುಪಡಿಸಿ) ನಡೆಸುವ ಅರ್ಹತೆಯಿಲ್ಲದ ವಕೀಲ.
  3. (ಅಮೆರಿಕನ್‍ ಪ್ರಯೋಗ) (ನಗರ ಮೊದಲಾದವುಗಳ) ನ್ಯಾಯಾಧಿಕಾರಿ.