sheriff ಷೆರಿಹ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ಷೆರಿಫ್‍:

  1. ಜಿಲ್ಲೆಯ ಯಾ ಕೌಂಟಿಯ ಶಾಂತಿಪಾಲನೆ, ನ್ಯಾಯಸ್ಥಾನಗಳ ನಿರ್ದೇಶನದಲ್ಲಿ ನ್ಯಾಯ ವಿತರಣೆ, ಪ್ರತಿನಿಧಿಯ ಮುಖಾಂತರ ರಿಟ್‍ಗಳ ಯಾ ಕೋರ್ಟಿನ ವಿಶೇಷಾಜ್ಞೆಗಳ ಜಾರಿಗೊಳಿಸಿಕೆ, ಚುನಾವಣೆಗಳಲ್ಲಿ ಅಧ್ಯಕ್ಷನಾಗಿ ವರ್ತಿಸುವುದು, ಮೊದಲಾದ ಕರ್ತವ್ಯಗಳನ್ನು ನಿರ್ವಹಿಸುವ, ಸರ್ಕಾರಿ ಅಧಿಕಾರಿ.
  2. (ಬ್ರಿಟಿಷ್‍ ಪ್ರಯೋಗ) (ಕೆಲವು ಪಟ್ಟಣಗಳಲ್ಲಿ ವರ್ಷೇ ವರ್ಷೇ ಚುನಾಯಿತನಾಗುವ) ಗೌರವ ಅಧಿಕಾರಿ.
  3. (ಸ್ಕಾಟ್ಲೆಂಡ್‍) ಜಿಲ್ಲೆಯ ಪ್ರಧಾನ ನ್ಯಾಯಮೂರ್ತಿ.
  4. (ಅಮೆರಿಕನ್‍ ಪ್ರಯೋಗ) ಜಿಲ್ಲೆಯ ಶಾಂತಿ ಪರಿಪಾಲನೆಯ ಜವಾಬ್ದಾರಿ ಹೊತ್ತಿರುವ ಚುನಾಯಿತ ಅಧಿಕಾರಿ.