sheep ಷೀಪ್‍
ನಾಮವಾಚಕ
(ಬಹುವಚನ ಅದೇ).
  1. ಕುರಿ; ಅಜ; ಮೇಕೆ; ಆಡು; ಮೇಷ; ಓವಿಸ್‍ ಕುಲದ,ಯಾವುದೇ ಮೆಲುಕು ಹಾಕುವ ಪ್ರಾಣಿ.
  2. (ರೂಪಕವಾಗಿ) ಕುರಿ:
    1. ಮುಹೇಡಿ; ಸಂಕೋಚ ಸ್ವಭಾವದವ.
    2. ಸಾಧು; ಮೃದು ಪ್ರಕೃತಿಯವ.
    3. ಪುಕ್ಕಲ; ಅಂಜುಕುಳಿ.
    4. ದಡ್ಡ.
  3. (ಸಾಮಾನ್ಯವಾಗಿ ಬಹುವಚನದಲ್ಲಿ)
    1. (ಕ್ರೈಸ್ತ ಗುರುವಿನ) ಶಿಷ್ಯ ವರ್ಗದವನು; ಅನುಯಾಯಿಗಳಲ್ಲೊಬ್ಬ.
    2. = parishioner.
  4. ಕುರಿಯ ಹದಮಾಡಿದ ಚರ್ಮ; ಕುರಿ ತೊಗಲು.
ಪದಗುಚ್ಛ
  1. like sheep (ಉದ್ಯೋಗಶೀಲತೆ, ಪ್ರಯತ್ನಶೀಲತೆ, ಸ್ವಂತಿಕೆ, ಸ್ವತಂತ್ರಬಉದ್ಧಿ, ಮೊದಲಾದವು ಇಲ್ಲದೆ) ಕುರಿಯಂಥ; ಕುರಿಯಂತೆ ಇನ್ನೊಬ್ಬರನ್ನು ಹಿಂಬಾಲಿಸುವ.
  2. separate the sheep from the goats ಉತ್ತಮ ಗುಣ ಯಾ ಮಟ್ಟದವನ್ನು ಕಡಮೆ ಗುಣ ಯಾ ಕೆಳಮಟ್ಟದವುಗಳಿಂದ ಬೇರ್ಪಡಿಸು; ಉತ್ತಮ ದರ್ಜೆಯ ಕೆಳದರ್ಜೆಯ ಗುಂಪುಗಳಾಗಿ ವಿಂಗಡಿಸು, ವಿಭಾಗಮಾಡು; ಉತ್ತಮಾಧಮಗಳನ್ನು ಬೇರ್ಪಡಿಸು, ವಿಂಗಡಿಸು.