See also 1shake
2shake ಷೇಕ್‍
ನಾಮವಾಚಕ
  1. ಅಲುಗಾಟ; ಅಲ್ಲಾಡಿಸುವುದು: with a shake of his head ತನ್ನ ತಲೆಯನ್ನಲ್ಲಾಡಿಸುವ ಮೂಲಕ. give it a shake ಅದನ್ನೊಂದು ಬಾರಿ ಅಲ್ಲಾಡಿಸು.
  2. ನಡುಕ; ಕಂಪನ; ಅದಿರುವಿಕೆ: with a shake in his voice ಕಂಪನದ, ನಡುಗುವ – ಧ್ವನಿಯಿಂದ.
  3. ಕುಲುಕಾಟ.
  4. (ರೂಪಕವಾಗಿ) (ಮನಸ್ಸಿಗೆ ಒದಗಿದ) ಆಘಾತ; ಭಾರೀ ಹೊಡೆತ, ಪೆಟ್ಟು.
  5. ಹಾಲು ರಸಾಯನ; ಕ್ಷೀರ ರಸಾಯನ; ಹಾಲಿಗೆ ಹಣ್ಣು, ಐಸ್‍ಕ್ರೀಮ್‍, ಮೊದಲಾದವನ್ನು ಹಾಕಿ ಚೆನ್ನಾಗಿ ಕಲಕಿ ಮಾಡಿದ ಪಾನೀಯ.
  6. (ಅಮೆರಿಕ, ನ್ಯೂಸೀಲೆಂಡ್‍) ಭೂಕಂಪ.
  7. (ಸಂಗೀತ) ಕಂಪನ.
  8. ಕ್ಷಣ.
  9. (ಬೆಳೆಯುತ್ತಿರುವ ಮರದ ದಾರುವಿನಲ್ಲಿ ಕಂಡುಬರುವ) ಬಿರುಕು; ಸೀಳು.
ಪದಗುಚ್ಛ
  1. all of a shake ಮೈಯೆಲ್ಲ ನಡುಗುತ್ತ; ನಡುಕದಿಂದ.
  2. in a brace of shakes = ಪದಗುಚ್ಛ \((3)\).
  3. in two shakes (of a lamb’s or dog’s tail) ಎರಡು ಕ್ಷಣದಲ್ಲಿ; ಬಹಳ ಬೇಗನೆ.
  4. no great shakes (ಆಡುಮಾತು) ತುಂಬ – ಒಳ್ಳೆಯದೇನೂ ಅಲ್ಲದ; ಅಷ್ಟೇನೂ ಮಹತ್ತ್ವದ್ದಲ್ಲದ.
  5. the shakes (ಏಕಾಏಕಿ ಮೈ ಮೇಲೆ ಬರುವ) ನಡುಕ; ಕಂಪನ; ಮೈಯೆಲ್ಲ ಕುಲುಕಿ ಕುಲುಕಿ ನಡುಗುವಿಕೆ.