series ಸಿಅರಿ()ಸ್‍
ನಾಮವಾಚಕ
(ಬಹುವಚನ ಅದೇ).
  1. (ಅನೇಕ ವಸ್ತುಗಳ ಸಮುದಾಯದಲ್ಲಿ ಒಂದೊಂದೂ ಹಿಂದಿನದಕ್ಕೆ ಸದೃಶವಾಗಿರುವ, ಯಾ ಪ್ರತಿಯೊಂದು ಜೊತೆಯೂ ಅದರ ಮುಂದಿನದಕ್ಕೆ ಒಂದೇ ಬಗೆಯ ಸಂಬಂಧವನ್ನು ಹೊಂದಿರುವ) ಸರಣಿ; ಶ್ರೇಣಿ; ಸಾಲು; ಪಂಕ್ತಿ; ಮಾಲೆ; ಸರಪಣಿ; ಪರಂಪರೆ; ಸಂತತಿ: a series of kings ರಾಜ ಪರಂಪರೆ, ಸಂತತಿ. a series of misfortunes ದುರದೃಷ್ಟ ಪರಂಪರೆ; ದುರದೃಷ್ಟಗಳ ಸಾಲು. a series of victories ವಿಜಯ – ಶ್ರೇಣಿ, ಮಾಲೆ.
  2. (ಒಂದೇ ಕಾಲದಲ್ಲಿ ಯಾ ಒಂದೇ ಆಳ್ವಿಕೆಯಲ್ಲಿ ಪ್ರಕಾಶಪಡಿಸಿದ ವಿವಿಧ ಬಗೆಯ ವಿವಿಧ ಬೆಲೆಗಳ ಸ್ಟಾಂಪುಗಳು, ನಾಣ್ಯಗಳು, ಮೊದಲಾದವುಗಳ) ಸರಣಿ; ಶ್ರೇಣಿ; ಮಾಲೆ.
  3. (ಅದೇ ಕ್ರೀಡಾದಳಗಳ ನಡುವೆ ನಡೆಯುವ) ಪಂದ್ಯಶ್ರೇಣಿ.
  4. (ಅದೇ ನಟ ನಟಿಯರು, ಗಾಯಕ ಗಾಯಕಿಯರು, ಮೊದಲಾದವರು ಪಾತ್ರವಹಿಸುವ ನಾಟ್ಯ, ನೃತ್ಯ, ಸಂಗೀತ, ಮೊದಲಾದವುಗಳ) ಪ್ರದರ್ಶನ ಸರಣಿ.
  5. (ಅದೇ ಭಾಷಣಕಾರನ ಯಾ ಅದೇ ವಿಷಯದ ವಿವಿಧ ಭಾಗಗಳು, ಮುಖಗಳನ್ನು ಕುರಿತ) ಭಾಷಣಮಾಲೆ; ಉಪನ್ಯಾಸಮಾಲೆ.
  6. (ನಿಯತಕಾಲಿಕಗಳ ಅನುಕ್ರಮ ಸಂಚಿಕೆಗಳ, ಒಂದೇ ವಿಷಯವನ್ನು ಕುರಿತ ಹಲವು ಲೇಖನಗಳ, ಯಾ ಒಬ್ಬನೇ ಕರ್ತೃವಿನ ಹಲವು ಬರಹಗಳ) ಶ್ರೇಣಿ; ಸರಣಿ: first series ಪ್ರಥಮ ಶ್ರೇಣಿ. second series ದ್ವಿತೀಯ ಶ್ರೇಣಿ.
  7. (ಏಕಾಕಾರದ ಯಾ ಏಕಾಂಕಿತದ ಯಾ ಒಬ್ಬನೇ ಸಾಮಾನ್ಯ ಸಂಪಾದಕನ ನೇತೃತ್ವದಲ್ಲಿ ರಚಿತವಾದ) ಪುಸ್ತಕಮಾಲೆ; ಗ್ರಂಥಮಾಲೆ.
  8. (ಭೂವಿಜ್ಞಾನ) ಶ್ರೇಣಿ:
    1. ಸ್ತರಶ್ರೇಣಿ; ಒಂದೇ ಬಗೆಯ ಲಕ್ಷಣಗಳುಳ್ಳ ಸ್ತರಗಳ ತಂಡ.
    2. ಸಮಾನಕಲ್ಪಶಿಲೆಗಳು; ಒಂದು ನಿರ್ದಿಷ್ಟ ಕಲ್ಪದಲ್ಲಿ ನಿಕ್ಷೇಪಗೊಂಡಿರುವ ಶಿಲೆಗಳು.
  9. (ವಿದ್ಯುತ್‍) ಸರಣಿ; ಶ್ರೇಣಿ:
    1. ಒಂದಾದ ಮೇಲೊಂದರಲ್ಲಿ ವಿದ್ಯುತ್ಪ್ರವಾಹ ಹರಿಯುವಂತೆ ಅಳವಡಿಸಿರುವ ಸರ್ಕೀಟುಗಳ ಯಾ ಘಟಕಗಳ ತಂಡ.
    2. ಒಂದರ ಧನ ಇಲೆಕ್ಟ್ರೋಡನ್ನು ಮುಂದಿನದರ ಋಣ ಇಲೆಕ್ಟ್ರೋಡಿಗೆ ಬಂಧಿಸಿರುವಂತೆ ಅಳವಡಿಸಿರುವ ವಿದ್ಯುತ್ಕೋಶಗಳ ಯಾ ಬ್ಯಾಟರಿಗಳ ತಂಡ.
  10. (ರಸಾಯನವಿಜ್ಞಾನ) ಸರಣಿ; ಶ್ರೇಣಿ; ಸಾಮಾನ್ಯ ಗುಣಲಕ್ಷಣಗಳಿರುವ ಮತ್ತು ಅಕ್ಕಪಕ್ಕದ ಎರಡು ಸಂಯುಕ್ತಗಳ ಅಣುಸೂತ್ರಗಳಿಗಿರುವ ವ್ಯತ್ಯಾಸ ಸ್ಥಿರವಾಗಿರುವ ಸಂಯುಕ್ತಗಳ ತಂಡ.
  11. (ಗಣಿತ) ಶ್ರೇಣಿ; ಒಂದು ಗೊತ್ತಾದ ರೀತಿಯಲ್ಲಿ ಏರುತ್ತ ಹೋಗುವ ಅಥವಾ ಒಂದು ಸಾಮಾನ್ಯ ಸಂಬಂಧದಿಂದ ನಿರ್ಧಾರವಾಗುವ ಬೇರೆಬೇರೆ ಬೆಲೆಗಳುಳ್ಳ ಸಂಖ್ಯೆಗಳ ತಂಡ, ಪರಿಮಾಣಗಳ ಅನುಕ್ರಮ: arithmetical series .
  12. (ಸಂಗೀತ) ದ್ವಾದಶ ಅರ್ಧಸ್ವರಮೇಳದ ಕೃತಿಮಾಲೆ; ಹನ್ನೆರಡು ಅರ್ಧಸ್ವರಗಳನ್ನು ವಿವಿಧ ಆರೋಹ ಅವರೋಹ ಕ್ರಮಗಳಲ್ಲಿ ಜೋಡಿಸಿ ರಚಿಸಿದ ಕೃತಿಮಾಲೆ.
ಪದಗುಚ್ಛ

in series

  1. (ವಿದ್ಯುದ್ವಿಜ್ಞಾನ) ಸರ್ಕೀಟು ತಂಡ; ವಿದ್ಯುತ್ಪ್ರವಾಹವು ಒಂದಾದಮೇಲೊಂದರಲ್ಲಿ ಹರಿಯುವಂತೆ ಏರ್ಪಡಿಸಿರುವ ಸರ್ಕೀಟ್‍ಗಳು ಯಾ ಘಟಕಗಳು.
  2. ಅನುಕ್ರಮದಲ್ಲಿ; ಅನುಕ್ರಮವಾಗಿ; ಒಂದರ ತರುವಾಯ ಇನ್ನೊಂದರಂತೆ; ಕ್ರಮಬದ್ಧ – ಸರಣಿಯಲ್ಲಿ, ಶ್ರೇಣಿಯಲ್ಲಿ.