See also 2scallop
1scallop ಸ್ಕಾ(ಸ್ಕಾ)ಲಪ್‍
ನಾಮವಾಚಕ
  1. (ಕಪ್ಪೆ ಚಿಪ್ಪಿನಂತಹ ಚಿಪ್ಪುಳ್ಳ, ಬಸವನ ಹುಳು, ಸಿಂಪಿ, ಮೊದಲಾದವುಗಳಂಥ) ಒಂದು ಬಗೆಯ ಇಚ್ಚಿಪ್ಪು ಮೀನು; ದ್ವಿವಲ್ಕ ಮೃದ್ವಂಗಿ. Figure: scallop(1)
  2. (ಸಿಂಪಿ, ಮಾಂಸದ ಸಣ್ಣ ಸಣ್ಣ ಚೂರುಗಳು, ಮೊದಲಾದವನ್ನು ಬೇಯಿಸುವ ಯಾ ವಿವಿಧ ಅಡುಗೆಗಳನ್ನು ಬಡಿಸುವ) ಇಚ್ಚಿಪ್ಪು ಮೀನಿನ ಒಂದು ಚಿಪ್ಪು; ಮಳಿಚಿಪ್ಪು.
  3. (ಚರಿತ್ರೆ) (ಪ್ಯಾಲೆಸ್ಟೆ ನಿಗೆ ಹೋಗಿಬಂದ ಕುರುಹಾಗಿ ಕ್ರೆ ಸ್ತ ಯಾತ್ರಿಕರು ಧರಿಸುತ್ತಿದ್ದ) ಇಚ್ಚಿಪ್ಪು ‘ ಮೀನಿನ’ ಒಂದು ಚಿಪ್ಪು; ವಲ್ಕ ಲಾಂಛನ.
  4. ಮಳಿಚಿಪ್ಪಿನಂತೆಯೇ ಆಳವಿಲ್ಲದ, ಅಡುಗೆಗಳನ್ನು ತುಂಬಿಡುವ, ಬೋಗುಣಿ.
  5. (ಬಹುವಚನದಲ್ಲಿ) ಮಳಿಚಿಪ್ಪಂಚು; ಮಳಿಚಿಪ್ಪು ಕರೆ; ಮಳಿಚಿಪ್ಪಿನೊಳಗಣ ರೇಖಾವಿನ್ಯಾಸದ (ಬಟ್ಟೆ ಮೊದಲಾದವುಗಳ) ಅಂಚು, ಕರೆ.