sargasso ಸಾರ್ಗ್ಯಾಸೋ
ನಾಮವಾಚಕ
(ಬಹುವಚನ sargassos ಯಾ sargassoes).

ಸಾರ್ಗ್ಯಾಸೋ (ಸಮುದ್ರ) ಕಳೆ ಯಾ (ಕಡಲ) ಜೊಂಡು; ಗಲ್ಫ್‍ ಸ್ಟ್ರೀಮ್‍ ಎಂಬ ಉಷ್ಣೋದಕ ಪ್ರವಾಹದಲ್ಲಿ ಮತ್ತು ಸಾರ್ಗ್ಯಾಸೋ ಸಮುದ್ರವೆಂದು ಹೆಸರಾದ ಉತ್ತರ ಅಟ್ಲಾಂಟಿಕ್‍ ಸಾಗರದಲ್ಲಿ ದ್ವೀಪಸ್ತೋಮಗಳಂತೆ ತೇಲುವ, ಸಾರ್ಗ್ಯಾಸಮ್‍ ಕುಲದ, ಬೆರಿಹಣ್ಣುಗಳಂಥ ಗಾಳಿಕೋಶಗಳಿರುವ, ಸಮುದ್ರ ಕಳೆ ಯಾ ಜೊಂಡು.