See also 2put  3put  4put  5put
1put ಪುಟ್‍
ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ put; ವರ್ತಮಾನ ಕೃದಂತ putting).
ಸಕರ್ಮಕ ಕ್ರಿಯಾಪದ
  1. (ವ್ಯಾಯಾಮಕ್ಕಾಗಿ ಯಾ ವ್ಯಾಯಾಮ ಸ್ಪರ್ಧೆಗಳಲ್ಲಿ ಭಾರ, ಕಲ್ಲು, ಗುಂಡು, ಮೊದಲಾದವನ್ನು ಅಂಗೈಯಿಂದ ಭುಜಸಮಕ್ಕೆತ್ತಿ, ದೂರಕ್ಕೆ) ಎಸೆ; ತೂರು: put the shot ಎಸೆಗುಂಡನ್ನು, ಇಡುಗುಂಡನ್ನು (ದೂರಕ್ಕೆ) ಎಸೆ, ತೂರು.
  2. (ಆಯುಧವನ್ನು ವ್ಯಕ್ತಿಯ ಮೈಯೊಳಕ್ಕೆ) ಚುಚ್ಚು; ಹಾಕು; ನಾಟು; (ವ್ಯಕ್ತಿಯನ್ನು ಆಯುಧದಿಂದ) ಇರಿ, ತಿವಿ: put a knife into (ವ್ಯಕ್ತಿಯ ಮೈಯೊಳಕ್ಕೆ) ಚೂರಿಯನ್ನು ಹಾಕು, ನಾಟು.
  3. (ವ್ಯಕ್ತಿಯನ್ನು ಯಾ ವಸ್ತುವನ್ನು ಕೊರೆದುಕೊಂಡು ಹೋಗುವಂತೆ ಗುಂಡು ಮೊದಲಾದ ಕ್ಷಿಪಣಿಯನ್ನು) ಹೊಡೆ; ಪ್ರಯೋಗಿಸು: put a bullet through (ವ್ಯಕ್ತಿಯನ್ನು ಯಾ ವಸ್ತುವನ್ನು ಕೊರೆದುಕೊಂಡು ಹೋಗುವಂತೆ) ಗುಂಡನ್ನು ಹೊಡೆ.
  4. (ಕಲ್ಲಿದ್ದಲು ಗಣಿಗಾರಿಕೆ) (ಟ್ರ್ಯಾಮ್‍ ಗಾಡಿಯನ್ನು ಯಾ ಕಲ್ಲಿದ್ದಲು ತುಂಬಿದ ಕೈಬಂಡಿಯನ್ನು) ದೂಡು; ನೂಕು; ತಳ್ಳು.
  5. (ವಸ್ತು ಮೊದಲಾದವನ್ನು) ಇಡು; ಇರಿಸು; ಮಡಗು: put it in your pocket ಅದನ್ನು ನಿನ್ನ ಜೇಬಿನಲ್ಲಿಡು. put it on the table ಅದನ್ನು ಮೇಜಿನ ಮೇಲಿರಿಸು.
  6. (ಗುರುತು, ಗೆರೆ, ಸಹಿ, ಮೊದಲಾದವನ್ನು) ಎಳೆ; ಹಾಕು: put a tick against the name ಆ ಹೆಸರಿನೆದುರಿಗೆ ಒಂದು ‘ಸರಿ’ ಗುರುತನ್ನು ಹಾಕು. put your signature to it ಅದಕ್ಕೆ ನಿನ್ನ ಸಹಿಯನ್ನು ಹಾಕು.
  7. (ಕುದುರೆ ಮೊದಲಾದವನ್ನು ಗಾಡಿಗೆ) ಕಟ್ಟು; ಹೂಡು: put the horse to the cart ಕುದುರೆಯನ್ನು ಗಾಡಿಗೆ ಕಟ್ಟು.
  8. (ಗೂಳಿ ಮೊದಲಾದವನ್ನು, ಹಸು ಮೊದಲಾದವುಗಳ ಮೇಲೆ)ಹಾರಿಸು; ಹಸು ಮೊದಲಾದವಕ್ಕೆ ಹೋರಿ ಮೊದಲಾದವನ್ನು ಕೊಡು: put the bull to the cow ಹಸುವಿನ ಮೇಲೆ ಗೂಳಿ ಹಾರಿಸು. put the cow to the bull ಹಸುವಿಗೆ ಹೋರಿಕೊಡು.
  9. (ವ್ಯಕ್ತಿ ಮೊದಲಾದವುಗಳ ವಿಷಯದಲ್ಲಿ ನದಿ ಮೊದಲಾದವನ್ನು) ದಾಟಿಸು: put him across the river ಅವನನ್ನು ನದಿದಾಟಿಸು.
  10. (ವ್ಯಕ್ತಿಯನ್ನು ಹಾಸಿಗೆ ಮೊದಲಾದವುಗಳ ಮೇಲೆ) ಮಲಗಿಸು: put the children to bed ಮಕ್ಕಳನ್ನು ಹಾಸಿಗೆಯ ಮೇಲೆ ಮಲಗಿಸು.
  11. (ಜೀವ, ಉತ್ಸಾಹ, ಮೊದಲಾದವನ್ನು) ತುಂಬು; ಎರೆ: has put new life into him ಅವನಲ್ಲಿ (ಅದು) ಹೊಸಜೀವವನ್ನು ಚೈತನ್ಯವನ್ನು ತುಂಬಿದೆ.
  12. (ವಿಷಯ ಮೊದಲಾದವನ್ನು, ವ್ಯಕ್ತಿಯ ಮುಂದೆ) ಇಡು; ಮಂಡಿಸು: will put the matter clearly before her ಈ ವಿಷಯವನ್ನು ಆಕೆಯ ಮುಂದೆ ಸ್ಪಷ್ಟವಾಗಿ ಮಂಡಿಸುತ್ತೇನೆ.
  13. (ವ್ಯಕ್ತಿಯನ್ನು ಯಾ ಪದಾರ್ಥವನ್ನು) ವಹಿಸು; ವಶಕ್ಕೆ ಕೊಡು: put yourself in my hands ನಿನ್ನನ್ನು ನನಗೆ, ನನ್ನ ವಶಕ್ಕೆ ವಹಿಸಿಬಿಡು.
  14. (ವ್ಯಕ್ತಿಯನ್ನು, ಸಂಸ್ಥೆಗೆ) ಸೇರಿಸು: put the child to school ಮಗುವನ್ನು ಶಾಲೆಗೆ ಸೇರಿಸು.
  15. (ಸರಕನ್ನು ಮಾರಾಟಕ್ಕೆ) ಇಡು: put it to sale ಅದನ್ನು ಮಾರಾಟಕ್ಕಿಡು.
  16. (ನಾಟಕವನ್ನು ರಂಗಭೂಮಿಗೆ) ತರು: put ‘Othello’ on the stage ‘ಒಥೆಲೋ’ ನಾಟಕವನ್ನು ರಂಗಭೂಮಿಗೆ ತಾ.
  17. (ವಸ್ತುವನ್ನು ವಸ್ತುವಿನೊಡನೆ) ಬೆರೆಸು; ಬೆರಸಿಕೊ: put milk to your tea ನಿನ್ನ ಚಹಕ್ಕೆ ಹಾಲನ್ನು ಬೆರಸಿಕೊ.
  18. (ಸರಕಿಗೆ ಬೆಲೆ) ಹಾಕು; ಇಡು: should put it at Rs. 100 ಅದಕ್ಕೆ 100 ರೂಪಾಯಿ ಬೆಲೆ ಹಾಕಬೇಕು.
  19. ಅಂದಾಜು ಮಾಡು: puts the circulation of the paper at 60,000 ಪತ್ರಿಕೆಯ ಪ್ರಸಾರ ಸಂಖ್ಯೆ 60,000 ಎಂದು ಅಂದಾಜು ಮಾಡುತ್ತಾನೆ. put the cost at Rs.5000 ಬೆಲೆ ಐದುಸಾವಿರ ರೂಪಾಯಿಗಳೆಂದು ಅಂದಾಜು ಮಾಡಿದ.
  20. ಭಾಷಾಂತರಿಸು; ಅನುವಾದಿಸು; ತರ್ಜುಮೆ ಮಾಡು; ಪರಿವರ್ತಿಸು: put it into Kannada ಅದನ್ನು ಕನ್ನಡಕ್ಕೆ ಅನುವಾದಿಸು.
  21. (ವಿಷಯವನ್ನು ಮಾತಿನಲ್ಲಿ, ಶಬ್ದಗಳಲ್ಲಿ) ಹೇಳು: cannot put it into words ಅದನ್ನು ಶಬ್ದಗಳಲ್ಲಿ ಹೇಳಲಾರೆ. to put it mildly ಅದನ್ನು ಸೌಮ್ಯವಾಗಿ ಹೇಳಬೇಕೆಂದರೆ.
  22. (ವಿಷಯಕ್ಕೆ) ಬೆಲೆ, ಮಹತ್ವ – ಕೊಡು; ಗೌರವಿಸು; ಮನ್ನಣೆಕೊಡು: puts no value on my advice ನನ್ನ ಬುದ್ಧಿವಾದಕ್ಕವನು ಏನೂ ಬೆಲೆ ಕೊಡುವುದಿಲ್ಲ.
  23. ಆಧಾರವಾಗಿ ಹೊಂದಿರು, ಇಟ್ಟುಕೊಂಡಿರು: I put my decision on the grounds stated ನನ್ನ ತೀರ್ಮಾನಕ್ಕೆ ನಾನು ಹೇಳಿದ ಕಾರಣಗಳೇ ಆಧಾರ.
  24. ಬಳಸು; ಉಪಯೋಗಿಸು: put it to good use ಅದನ್ನು ಒಳ್ಳೆಯ ಉಪಯೋಗಕ್ಕಾಗಿ ಬಳಸು.
  25. ಭಾವಿಸಿಕೊ; ಕಲ್ಪಿಸಿಕೊ: put yourself in his place ನೀನು ಅವನ ಸ್ಥಾನದಲ್ಲಿರುವಂತೆ ಭಾವಿಸಿಕೊ. put the will for the deed ಸಂಕಲ್ಪವನ್ನೇ ಕಾರ್ಯವೆಂದು ಭಾವಿಸಿಕೊ; ಕಾರ್ಯವು ನಡೆಯದಿದ್ದರೂ ನಡೆಯಿತೆಂದು ಭಾವಿಸಿಕೊ; ಕಾರ್ಯವು ಅಸಮರ್ಪಕವಾದರೂ (ಮಾಡಿದವನ ಒಳ್ಳೆಯ ಸಂಕಲ್ಪವನ್ನು ನೋಡಿ) ಸಮರ್ಪಕವೆಂದೇ ಭಾವಿಸಿಕೊ.
  26. (ತೆರಿಗೆ ಮೊದಲಾದವನ್ನು) ವಿಧಿಸು; ಹಾಕು; ಹೇರು: put a tax on water ನೀರಿನ ಮೇಲೆ ತೆರಿಗೆ ಹಾಕು.
  27. (ತಪ್ಪು, ಜವಾಬ್ದಾರಿ, ಮೊದಲಾದವನ್ನು) ಹೊರಿಸು: put the blame on person ವ್ಯಕ್ತಿಯ ಮೇಲೆ ತಪ್ಪುಹೊರಿಸು.
  28. (ಒಂದು ಸ್ಥಿತಿಗೆ) ತರು; (ಒಂದು ಸ್ಥಿತಿಯಲ್ಲಿ) ಇಡು: put him into great difficulty ಅವನನ್ನು ತುಂಬ ಕಷ್ಟಕ್ಕೆ ಸಿಕ್ಕಿಸು. put the car out of action ಕಾರು ಓಡದಂತೆ, ಕೆಲಸ ಮಾಡದಂತೆ ಮಾಡು.
  29. (ವ್ಯಕ್ತಿಯನ್ನು ಸಾವು, ವೆಚ್ಚ, ನಾಚಿಕೆ, ಪರೀಕ್ಷೆ, ಚಿತ್ರಹಿಂಸೆ, ಮೊದಲಾದವುಗಳಿಗೆ) ಗುರಿಮಾಡು; ಈಡುಮಾಡು: put person to death ವ್ಯಕ್ತಿಯನ್ನು ಕೊಲ್ಲು, ಸಾವಿಗೆ ಈಡು ಮಾಡು. put person to shame ವ್ಯಕ್ತಿಯನ್ನು ನಾಚಿಕೆಪಡುವಂತೆ ಮಾಡು.
  30. (ಒಂದು ವಸ್ತುವನ್ನು ಮತ್ತೊಂದಕ್ಕೆ) ಪರ್ಯಾಯವಾಗಿ, ಬದಲಿಯಾಗಿ – ಇಡು.
ಅಕರ್ಮಕ ಕ್ರಿಯಾಪದ
  1. (ಹಡಗು ಮೊದಲಾದವು) ಬಂದರಿನಿಂದ ಹೊರಡು ಯಾ ಬಂದರಿಗೆ ಹಿಂದಿರುಗು.
  2. (ಅಮೆರಿಕನ್‍ ಪ್ರಯೋಗ) (ನದಿಯ ವಿಷಯದಲ್ಲಿ) ಒಂದು ನಿರ್ದಿಷ್ಟ ದಿಕ್ಕಿನಲ್ಲಿ ಹರಿ, ಪ್ರವಹಿಸು.
ಪದಗುಚ್ಛ
  1. I put it to you (ಮುಖ್ಯವಾಗಿ ವಕೀಲನು ಸಾಕ್ಷಿಯನ್ನು ವಿಚಾರಿಸುವಲ್ಲಿ, ತನ್ನ ಸೂಚನೆಯನ್ನು ಅವನು ಒಪ್ಪಿಕೊಳ್ಳುವಂತೆ ಮಾಡಲು ಹೇಳುವ ಮಾತು) ನಾನು ನಿಮಗೆ ಹೀಗೆ ಸೂಚಿಸುತ್ತೇನೆ.
  2. not know where to put oneself (ಏನು ಮಾಡಬೇಕೆಂದು ಗೊತ್ತಾಗದ) ಮುಜುಗರಕ್ಕೆ ಸಿಕ್ಕು, ಬೀಳು.
  3. put a bold $^1$face on it.
  4. put about
    1. (ಚಲಿಸುತ್ತಿರುವ ಹಡಗುಗಳನ್ನು) ಬೇರೆ ದಿಕ್ಕಿಗೆ ತಿರುಗಿಸು; ದಿಕ್ಕು ಬದಲಿಸು.
    2. (ಕುದುರೆ, ಜನಸಮೂಹ, ಮೊದಲಾದವನ್ನು) ಹಿಂದುಮುಂದಾಗಿ ತಿರುಗಿಸು.
    3. (ಹಡಗಿನ ವಿಷಯದಲ್ಲಿ) ಸಾಗು; ಚಲಿಸು.
    4. (ಮುಖ್ಯವಾಗಿ ಸ್ಕಾಟ್ಲಂಡ್‍ ಪ್ರಯೋಗ) ತೊಂದರೆಪಡಿಸು; ಸಂಕಟಪಡಿಸು; ಗೋಳುಗುಟ್ಟಿಸು.
    5. (ಸುದ್ದಿ, ಗಾಳಿಸುದ್ದಿ, ಮೊದಲಾದವನ್ನು) ಹರಡು.
  5. put a check on it ಅದಕ್ಕೆ ತಡೆಹಾಕು.
  6. put across
    1. ಒಪ್ಪಿಗೆಯಾಗುವಂತೆ ಯಾ ಪರಿಣಾಮಕಾರಿಯಾಗುವಂತೆ ಮಾಡು.
    2. ಯಶಸ್ವಿಯಾಗಿ ಮಾಡು, ನೆರವೇರಿಸು; ಜಯಪ್ರದವಾಗಿ ಸ್ಥಾಪಿಸು.
    3. (ವಿಷಯವನ್ನು) ಅರ್ಥವಾಗುವಂತೆ ತಿಳಿಯಪಡಿಸು: she put across her new idea ಆಕೆ ತನ್ನ ಹೊಸ ಭಾವನೆಯನ್ನು ಅರ್ಥವಾಗುವಂತೆ ತಿಳಿಯಪಡಿಸಿದಳು.
  7. put a good $^1$face on the matter.
  8. put a horse through his paces ಕುದುರೆಗೆ (ಒಂದು ನಿರ್ದಿಷ್ಟ ರೀತಿಯಲ್ಲಿ) ಹೆಜ್ಜೆಹಾಕಲು ಕಲಿಸು.
  9. put a horse to fence ಕುದುರೆಯಿಂದ ಬೇಲಿ ಹಾರಿಸು.
  10. put and take ಚಪ್ಪಟೆ ಮೂತಿಯ ಬುಗುರಿಯಿಂದಾಡುವ ಒಂದು ಜೂಜಾಟ.
  11. put an $^1$end to.
  12. put an end to oneself (or one’s life) ಆತ್ಮಹತ್ಯೆ ಮಾಡಿಕೊ; ತನ್ನ ಜೀವವನ್ನು ತಾನೇ ತೆಗೆದುಕೊ.
  13. put an end to (someone) (ಒಬ್ಬನನ್ನು) ಮುಗಿಸಿಬಿಡು; ತೀರಿಸಿಬಿಡು; ಪೂರೈಸಿಬಿಡು; ಕೊಲ್ಲು.
  14. put a person in $^1$mind of.
  15. put a person upto
    1. (ವಿಷಯವನ್ನು) ವ್ಯಕ್ತಿಗೆ ತಿಳಿಸು, ತಿಳಿಯಹೇಳು.
    2. ಒಬ್ಬ ವ್ಯಕ್ತಿಯನ್ನು ಚಿತಾಯಿಸು, ಚಿತಾವಣೆ ಮಾಡು: put them up to stealing the money ಆ ಹಣವನ್ನು ಕದಿಯಬೇಕೆಂದು ಅವರಿಗೆ ಚಿತಾವಣೆ ಮಾಡು.
  16. put a person $^1$wise.
  17. put a $^1$spoke in one’s wheel.
  18. put a stopper on it ಅದಕ್ಕೆ ಬಿರಡೆ ಹಾಕು; ಅದಕ್ಕೆ ತಡೆಹಾಕು.
  19. put a veto on it ಅದಕ್ಕೆ ಪ್ರತಿಬಂಧಕ ಹಾಕು; ಅದನ್ನು ವಿರೋಧಿಸು, ಪ್ರತಿಷೇಧಿಸು.
  20. put away
    1. (ಪ್ರಾಚೀನ ಪ್ರಯೋಗ) ದಾಂಪತ್ಯವಿಚ್ಛೇದಮಾಡಿಕೊ.
    2. (ಹಣ ಮೊದಲಾದವನ್ನು, ಮುಂದೆ ಒದಗಬಹುದಾದ ಉಪಯೋಗಕ್ಕಾಗಿ) ಎತ್ತಿಡು; ತೆಗೆದಿಡು; ಮಿಗಿಸಿಡು.
    3. (ಆಹಾರ, ಪಾನೀಯಗಳನ್ನು) ಭಾರಿ ಪ್ರಮಾಣದಲ್ಲಿ ಹೊಟ್ಟೆಗೆ ತುಂಬಿಕೊ, ಇಳಿಸು, ಸೇರಿಸು.
    4. (ಆಡುಮಾತು) ಸೆರೆಮನೆಗೆ ಹಾಕು ಯಾ ಮನೋರೋಗದ ಆಸ್ಪತ್ರೆಗೆ ಸೇರಿಸು.
    5. (ಆಡುಮಾತು) (ವಸ್ತುಗಳನ್ನು) ಒತ್ತೆಇಡು; ಗಿರವಿ ಇಡು.
    6. (ವಯಸ್ಸಾದ ಯಾ ರೋಗಗ್ರಸ್ತವಾದ) ಪ್ರಾಣಿಯನ್ನು ಸಾಯಿಸು, ಕೊಲ್ಲು.
    7. ಒಂದು ವಸ್ತುವನ್ನು ಅದರ ಸ್ವಸ್ಥಾನದಲ್ಲಿ ಇರಿಸು.
  21. put back
    1. ಮುಂದುವರಿಯುವುದನ್ನು, ಪ್ರಗತಿಯನ್ನು – ತಡೆ.
    2. ಹಿಂದಿನ ಸ್ಥಳದಲ್ಲೇ ಮತ್ತೆ ಇಡು; ಇದ್ದಲ್ಲಿಗೇ ಪುನಃ ಸೇರಿಸು.
    3. ಗಡಿಯಾರದ ಮುಳ್ಳನ್ನು ಹಿಂದಕ್ಕೆ ತಿರುಗಿಸು.
    4. (ಕಾರ್ಯಕ್ರಮವನ್ನು) ಮುಂದೂಡು; ಅನಂತರದ ತೇದಿಗೆ ಯಾ ಕಾಲಕ್ಕೆ ಹಾಕು, ಬದಲಾಯಿಸು.
  22. put blame etc. on ತಪ್ಪು, ದೂರು, ಮೊದಲಾದವನ್ನು ಒಬ್ಬನ ಮೇಲೆ ಹಾಕು, ಹೊರಿಸು: don’t put the blame on me ಆ ತಪ್ಪನ್ನು ನನ್ನ ಮೇಲೆ ಹೊರಿಸಬೇಡ.
  23. put by (ಮುಖ್ಯವಾಗಿ ಮುಂದೆ ಒದಗಬಹುದಾದ ಉಪಯೋಗಕ್ಕಾಗಿ ಹಣ ಮೊದಲಾದವನ್ನು) ಎತ್ತಿಡು; ತೆಗೆದಿಡು; ಮಿಗಿಸಿಡು.
  24. put doubts etc. at rest ಸಂದೇಹಗಳು ಮೊದಲಾದವನ್ನು ಅಡಗಿಸು, ನಿವಾರಣೆ ಮಾಡು.
  25. put down
    1. (ಬಲ ಯಾ ಅಧಿಕಾರದಿಂದ) ಅದುಮಿಬಿಡು; ಅಡಗಿಸು; ದಮನಮಾಡು.
    2. (ವಿಷಯವನ್ನು) ಬರೆದುಕೊ.
    3. ಗದರಿಸಿ ಅವಮಾನ ಮಾಡು; ಛೀಮಾರಿ ಹಾಕು; ತೇಜೋಭಂಗ ಮಾಡು.
    4. ಬಾಯಿ ಮುಚ್ಚಿಸು; ಮೌನಗೊಳಿಸು.
    5. (ಹೆಚ್ಚು ವೆಚ್ಚದ ಬಾಬನ್ನು) ನಿಲ್ಲಿಸಿಬಿಡು.
    6. ಎಣಿಸು; ಪರಿಗಣಿಸು; ಭಾವಿಸು: I put him down for fool ನಾನು ಅವನನ್ನು ಮುಠ್ಠಾಳನೆಂದು ಎಣಿಸುತ್ತೇನೆ.
    7. ಕಾರಣವೆನ್ನು: I put it down to his nervousness ಅದಕ್ಕೆ ಅವನ ದಿಗಿಲೇ ಕಾರಣವೆನ್ನುತ್ತೇನೆ.
    8. (ಒಬ್ಬ ವ್ಯಕ್ತಿಯ) ಹೆಸರನ್ನು ರಹಸ್ಯವಾಗಿ ಪಟ್ಟಿಯಲ್ಲಿ ಸೇರಿಸು.
    9. (ಮುದಿಯಾದ ಯಾ ರೋಗಪೀಡಿತವಾದ ಪ್ರಾಣಿಯನ್ನು) ಕೊಲ್ಲು.
    10. (ಮೊಟ್ಟೆಗಳು ಮೊದಲಾದವನ್ನು ಮುಂದೆ ಬಳಸಲು) ರಕ್ಷಿಸು.
    11. (ನಿಗದಿತ ಮೊತ್ತವನ್ನು) ಠೇವಣಿಯಾಗಿ ಕೊಡು, ಇಡು.
    12. (ಮಗುವನ್ನು) ಮಲಗಿಸು.
    13. (ವಿಮಾನವನ್ನು) ನೆಲಕ್ಕೆ ಇಳಿಸು.
    14. (ಪ್ರಯಾಣಿಕರು ಇಳಿಯಲು, ಯಾ ಅವರನ್ನು ಇಳಿಸಲು ಬಸ್ಸು, ವಾಹನ, ಮೊದಲಾದವು) ನಿಲ್ಲು; ನಿಲ್ಲಿಸು.
    15. ಬರೆದಿಡು; ದಾಖಲಿಸು: put it down in your diary ನಿನ್ನ ಡೈರಿಯಲ್ಲಿ ಬರೆದಿಡು.
    16. (ಮುಖ್ಯವಾಗಿ ಶಾಸನಸಭೆಯಲ್ಲಿ) ಸಭೆಯ ಯಾ ಚರ್ಚೆಯ ಕಾರ್ಯಕ್ರಮದಲ್ಲಿ ಸೇರಿಸು.
  26. put dues etc. on ಬರಬೇಕಾದ ಬಾಕಿಯನ್ನು ಹೊರಿಸು, ವಿಧಿಸು, ಹೇರು: dues were put on cattle ದನಗಳ ಮೇಲೆ ತೆರಿಗೆ ಹೇರಲಾಯಿತು.
  27. put forth
    1. (ಬಲ, ಯತ್ನ, ವಾಗ್ಮಿತೆ, ಮೊದಲಾದವನ್ನು) ಬಳಸು; ಪ್ರಯೋಗಿಸು.
    2. (ಔಪಚಾರಿಕ) ಚಲಾವಣೆಗೆ, ಚಾಲ್ತಿಗೆ – ತರು, ಕೊಡು.
    3. (ಗಿಡ, ಮರಗಳ ವಿಷಯದಲ್ಲಿ) ಮೊಗ್ಗು, ಎಲೆ, ಮೊದಲಾದವನ್ನು – ಕಚ್ಚು, ತಳೆ, ಬಿಡು.
  28. put forward
    1. (ಅನೇಕ ವೇಳೆ ಆತ್ಮಾರ್ಥಕ) ಪ್ರಾಮುಖ್ಯ ಗಳಿಸಲು ಮುನ್ನುಗ್ಗು; ಗಮನ ಸೆಳೆಯಲು ಮುಂದಾಗು.
    2. (ಸಿದ್ಧಾಂತ ಮೊದಲಾದವನ್ನು) ಮುಂದಿಡು; ಮಂಡಿಸು.
    3. (ಗಡಿಯಾರದ) ಮುಳ್ಳುಗಳನ್ನು ಮುಂದಕ್ಕೆ ತಿರುಗಿಸು.
  29. put in for
    1. (ಒಂದು ನಿರ್ದಿಷ್ಟ ವಿಷಯಕ್ಕೆ) ಹಕ್ಕು ಹೂಡು.
    2. (ಹುದ್ದೆ, ಚುನಾವಣೆ, ಮೊದಲಾದವಕ್ಕೆ) ಅಭ್ಯರ್ಥಿಯಾಗು; ಉಮೇದುವಾರನಾಗು.
  30. put in
    1. (ಅಧಿಕಾರ ಮೊದಲಾದವಕ್ಕೆ) ನೇಮಿಸು: put in a caretaker ನೋಡಿಕೊಳ್ಳುವವನನ್ನು, ಮೇಲ್ವಿಚಾರಕನೊಬ್ಬನನ್ನು – ನೇಮಿಸು.
    2. (ನ್ಯಾಯಸ್ಥಾನದ ಮುಂದೆ ಯಾ ನ್ಯಾಯಸ್ಥಾನದಲ್ಲಿ ಮಾಡುವಂತೆ, ದಸ್ತಾವೇಜು, ರುಜುವಾತು, ವಾದ, ಹಕ್ಕು, ಜಾಮೀನು, ಮೊದಲಾದವನ್ನು) ಮುಂದಿಡು; ಮಂಡಿಸು; ವಿಧಿವತ್ತಾಗಿ ಹಾಜರುಪಡಿಸು.
    3. (ಟೀಕೆ, ಉಲ್ಲೇಖ, ಹೆಚ್ಚಿನ ವಿಷಯ, ಮೊದಲಾದವನ್ನು) ನಡುವೆ ತೂರಿಸು, ಸೇರಿಸು.
    4. (ಪೂರ್ತಿ ಕೆಲಸದ) ಒಂದು ಅಂಶವನ್ನು ಮಾಡು.
    5. (ಆಡುಮಾತು) ಹೊತ್ತು ಹೊರೆ; ಕಾಲ ಕಳೆ.
  31. put in an appearance (ನ್ಯಾಯಾಲಯ, ಸಭೆ, ಮೊದಲಾದವುಗಳಲ್ಲಿ) ಮುಖ ತೋರಿಸು; ಕಾಣಿಸಿಕೊ; ಹಾಜರಾಗು.
  32. put in distress ಸಂಕಟದಲ್ಲಿ ಸಿಕ್ಕಿಸು; ವ್ಯಥೆಗೀಡುಮಾಡು.
  33. put in doubt ಸಂದೇಹ ಹುಟ್ಟಿಸು; ಸಂಶಯಕ್ಕೊಳಪಡಿಸು.
  34. put in execution ಜಾರಿಮಾಡು.
  35. put insult etc. on ಅಪಮಾನ ಮೊದಲಾದವಕ್ಕೆ ಗುರಿಮಾಡು: every insult was put on him ಅವನನ್ನು ಎಲ್ಲ ಬಗೆಯ ಅಪಮಾನಕ್ಕೂ ಗುರಿಮಾಡಲಾಯಿತು.
  36. put into action (or force) ಜಾರಿಗೆ ತರು.
  37. put into circulation ಚಲಾವಣೆಗೆ ತರು.
  38. put into one’s possession ಒಬ್ಬನ ವಶಕ್ಕೆ ಕೊಡು, ಸ್ವಾಧೀನಕ್ಕೆ ತರು.
  39. put it (or one) across ಮೋಸದಿಂದ, ವಂಚನೆಯಿಂದ – ಸಾಧಿಸು.
  40. put it to a person ನಿರಾಕರಿಸುವಂತೆ, ಇಲ್ಲವೆಂದು ಹೇಳುವಂತೆ (ವ್ಯಕ್ತಿಗೆ) ಸವಾಲು ಹಾಕು.
  41. put land in (or under) potatoes etc. ಜಮೀನಿನಲ್ಲಿ ಆಲೂಗೆಡ್ಡೆ ಮೊದಲಾದವನ್ನು ಬಿತ್ತು, ಬೆಳೆ, ಹಾಕು.
  42. put money on a horse (ಜೂಜಿನಲ್ಲಿ) ಕುದುರೆಯ ಮೇಲೆ ಬಾಜಿಕಟ್ಟು, ಪಣವೊಡ್ಡು.
  43. put off
    1. ಮುಂದಕ್ಕೆ ಹಾಕು; ಮುಂದೂಡು.
    2. (ಒಬ್ಬನೊಡನೆ) ಮಾಡಿಕೊಂಡ ಗೊತ್ತುಪಾಡನ್ನು ಮುಂದೂಡು.
    3. (ನೆವಹೇಳಿ ಒಬ್ಬನ ಒತ್ತಾಯ ಯಾ ತಗಾದೆಯಿಂದ) ತಪ್ಪಿಸಿಕೊ; ನುಣುಚಿಕೊ; ಜಾರಿಕೊ.
    4. (ಕೆಲಸ ಮೊದಲಾದವನ್ನು ಮಾಡದಂತೆ) ಅಡ್ಡಿಪಡಿಸು; ತಡೆ.
    5. (ಒಬ್ಬನಿಗೆ) ಕಿರಿಕಿರಿ ಉಂಟುಮಾಡು; ರೇಗಿಸು.
    6. (ಒಬ್ಬನ) ಮನಸ್ಸನ್ನು ಕಲಕು, ಕ್ಷೋಭೆಗೊಳಿಸು.
    7. (ಒಬ್ಬನನ್ನು) ಯಾವುದರಲ್ಲಾದರೂ ಆಸಕ್ತಿ ಕಳೆದುಕೊಳ್ಳುವಂತೆ ಮಾಡು.
    8. (ಯಾವುದನ್ನೇ) ಒಬ್ಬನ ತಲೆಗೆ ಕಟ್ಟು: was it right to put him off on your uncle, when you did not like him yourself? ನಿನಗೇ ಬೇಡದವನನ್ನು ನಿನ್ನ ಚಿಕ್ಕಪ್ಪನ ತಲೆಗೆ ಕಟ್ಟಿದ್ದು ನ್ಯಾಯವೇ?
    9. (ಉಡುಪು ಮೊದಲಾದವನ್ನು) ಕಳಚು; ಬಿಚ್ಚಿಹಾಕು.
    10. (ದೋಣಿ, ನಾವಿಕರು, ಮೊದಲಾದವುಗಳ ವಿಷಯದಲ್ಲಿ) ತೀರವನ್ನು ಬಿಟ್ಟು ಹೊರಡು.
  44. put on
    1. ಉಡುಪು (ಇನ್ನೊಬ್ಬನಿಗೆ) ಹಾಕು ಯಾ (ತಾನು) ಹಾಕಿಕೊ.
    2. ಭಾವ ನಟಿಸು; ಭಾವದಿಂದ ಪ್ರಭಾವಿತನಾದಂತೆ ತೋರಿಸಿಕೊ, ಪ್ರದರ್ಶಿಸಿಕೊ.
    3. (ಪಾತ್ರ, ವೇಷ, ಮೊದಲಾದವನ್ನು) ಹಾಕು; ತಾಳು; ಧರಿಸು.
    4. ಮೈತುಂಬಿಕೊ; ಮೈತೂಕ ಹೆಚ್ಚಾಗು.
    5. (ಬೆಲೆ, ರನ್ನುಗಳು, ಮೊದಲಾದವಕ್ಕೆ ಇನ್ನಷ್ಟು) ಸೇರಿಸು.
    6. (ಜೂಜಿನಲ್ಲಿ, ಕುದುರೆ ಮೊದಲಾದವುಗಳ ಮೇಲೆ) ಪಣವೊಡ್ಡು.
    7. (ಗಡಿಯಾರದ ಮುಳ್ಳನ್ನು) ಮುಂದಕ್ಕಿಡು.
    8. (ಬಲ, ಒತ್ತಾಯ, ಮೊದಲಾದವನ್ನು) ಪ್ರಯೋಗಿಸು; ಕಾರ್ಯಗತಮಾಡು.
    9. (ಕ್ರಿಕೆಟ್ಟಿನಲ್ಲಿ) ಆಟಗಾರನನ್ನು ಬೋಲ್‍ ಮಾಡಲು ಕಳುಹಿಸು.
    10. (ರೈಲುಗಾಡಿ) ಹೊರಡಲು ಏರ್ಪಾಡು ಮಾಡು.
    11. ವಿದ್ಯುದ್ದೀಪವನ್ನು ಹಾಕು, ಹೊತ್ತಿಸು.
    12. ವಿದ್ಯುದುಪಕರಣಗಳನ್ನು ಚಾಲನೆಗೊಳಿಸು; ಕಾರ್ಯಮಾಡುವಂತೆ ಮಾಡು: put on the radio ರೇಡಿಯೋ ಹಾಕು.
    13. put on the record ರೆಕಾರ್ಡ್‍ ಹಾಕು; ರೆಕಾರ್ಡ್‍ ಹಾಡು ನುಡಿಯುವಂತೆ ಮಾಡು.
    14. (ಮುಖ, ಚರ್ಮ, ಮೊದಲಾದವಕ್ಕೆ) ಹಚ್ಚು; ಲೇಪಿಸು: put on lipstick ತುಟಿಗೆ ಬಣ್ಣ ಹಚ್ಚು.
    15. ವಾಹನಸೌಕರ್ಯ – ಕಲ್ಪಿಸು, ಒದಗಿಸು: put on extra trains during the holiday period ರಜದ ಅವಧಿಯಲ್ಲಿ ಹೆಚ್ಚಿನ ರೈಲುಗಳನ್ನು ಒದಗಿಸು, ಹಾಕು.
    16. (ನಾಟಕ, ಪ್ರದರ್ಶನ, ಮೊದಲಾದವನ್ನು) ಪ್ರದರ್ಶಿಸು.
    17. (ಒಬ್ಬನ ಯಾ ಒಂದರ) ವಿಷಯ – ತಿಳಿಸು, ಹೇಳು: put me on to a good dentist ಒಬ್ಬ ಒಳ್ಳೆಯ ದಂತತಜ್ಞನ ವಿಷಯ ತಿಳಿಸು.
    18. (ಒಬ್ಬನ) ಪರಿಚಯ, ಸಂಪರ್ಕ ಕಲ್ಪಿಸಿಕೊಡು; ಒಬ್ಬನ ಪರಿಚಯ, ಭೇಟಿ ಮಾಡಿಸು: put me on to the new manager ನನಗೆ ಹೊಸ ಮ್ಯಾನೇಜರ್‍ನ ಪರಿಚಯ, ಭೇಟಿ ಮಾಡಿಸು.
  45. put on airs ಜಂಬಮಾಡು; ಪ್ರತಿಷ್ಠೆ ತೋರಿಸು.
  46. put one at one’s ease ಒಬ್ಬನನ್ನು ಆತಂಕವಿಲ್ಲದೆ, ಸಂಕೋಚವಿಲ್ಲದೆ, ಹಾಯಾಗಿರುವಂತೆ ಮಾಡು: I put the stranger at his ease ಅಪರಿಚಿತನನ್ನು ಸಂಕೋಚವಿಲ್ಲದೆ ಹಾಯಾಗಿರುವಂತೆ ಮಾಡಿದೆ.
  47. put one in fear of one’s life ಒಬ್ಬನಿಗೆ ಜೀವಭಯವುಂಟಾಗುವಂತೆ ಮಾಡು.
  48. put one in mind of ಒಬ್ಬನಿಗೆ (ವಿಷಯವನ್ನು) ನೆನಪಿಗೆ ತರು.
  49. put one in the wrong ಒಬ್ಬನನ್ನು ತಪ್ಪು ಮಾಡಿದವನೆಂದು ತೋರಿಸು: he always manages to put me in the wrong ಅವನು ಯಾವಾಗಲೂ ತಪ್ಪು ನನ್ನದೇ ಎಂದು ಹೇಗೋ ತೋರಿಸಿಬಿಡುತ್ತಾನೆ.
  50. put one on one’s guard ಒಬ್ಬನನ್ನು ಜಾಗರೂಕನಾಗಿರುವಂತೆ ಮಾಡು.
  51. put one on one’s honour (ವಿಷಯವನ್ನು) ಒಬ್ಬನ ಆತ್ಮಗೌರವಕ್ಕೆ, ಮರ್ಯಾದೆಗೆ ಬಿಡು.
  52. put one on one’s mettle ಒಬ್ಬನು ತನ್ನ ಸರ್ವಶಕ್ತಿಯನ್ನೂ ಪ್ರಯೋಗಿಸುವಂತೆ ಮಾಡು; ಒಬ್ಬನ ಸಾಮರ್ಥ್ಯವೆಲ್ಲ ಹೊರಪಡುವಂತೆ ಮಾಡು.
  53. put one on one’s oath ಒಬ್ಬನು ಪ್ರಮಾಣಮಾಡಿ, ಆಣೆಯಿಟ್ಟುಕೊಂಡು (ನಿಜ) ಹೇಳುವಂತೆ ಮಾಡು.
  54. put one’s back up (ಒಬ್ಬನನ್ನು)ತೀರ ರೇಗಿಸು, ಕೆರಳಿಸು.
  55. put one’s $^1$foot down.
  56. put one’s $^1$foot in it.
  57. put one’s hand to the 1plough.
  58. put one’s money into land etc. ತನ್ನ ಹಣವನ್ನು ಜಮೀನಿನ ಮೇಲೆ ಹಾಕು; ಜಮೀನಿನ ಮೇಲೆ ಬಂಡವಾಳ ಹೂಡು.
  59. put one’s $^1$ನೊಸೆ out of joint.
  60. put one’s $^1$shoulder to the wheel.
  61. put one through a book ಒಬ್ಬನು ಯಾವುದೇ ಪುಸ್ತಕವನ್ನು ಓದುವಂತೆ ಮಾಡು: he put his friend through the books of Euclid ತನ್ನ ಗೆಳೆಯನು ಯೂಕ್ಲಿಡನ (ಜ್ಯಾಮಿತಿ) ಗ್ರಂಥಗಳನ್ನು ಓದುವಂತೆ ಮಾಡಿದ.
  62. put one to ಒಬ್ಬನನ್ನು (ಸಾವು ಮೊದಲಾದವುಗಳಿಗೆ) ಗುರಿಪಡಿಸು; ಈಡುಮಾಡು: put one to ransom (ಯುದ್ಧಕೈದಿ ಮೊದಲಾದವರನ್ನು) ಬಿಡುಗಡೆಯ ತೆರವನ್ನು ತೆರುವಂತೆ ಒತ್ತಾಯಪಡಿಸು.
  63. put one to flight (ಒಬ್ಬನನ್ನು) ಓಡಿಸಿಬಿಡು; ಪಲಾಯನ ಮಾಡಿಸು; ಕಾಲ್ತೆಗೆಯುವಂತೆ ಮಾಡು.
  64. put one to mind the furnace etc. ಒಬ್ಬನನ್ನು ಕುಲುಮೆ ಮೊದಲಾದವನ್ನು ನೋಡಿಕೊಳ್ಳಲು ಹಾಕು, ನೇಮಿಸು.
  65. put one to one’s shifts ಒಬ್ಬನು ತನ್ನ ವ್ಯವಸ್ಥೆಯನ್ನು ತಾನೇ ನೋಡಿಕೊಳ್ಳುವಂತೆ ಮಾಡು.
  66. put one to one’s trumps ಒಬ್ಬನು ತನ್ನ ತುರುಫನ್ನೇ ಆಡುವಂತೆ ಮಾಡು; ತನ್ನ ಕಟ್ಟಕಡೆಯ ಪಟ್ಟು, ಶಕ್ತಿ ಯಾ ಯುಕ್ತಿಯನ್ನು ಪ್ರಯೋಗಿಸುವಂತೆ ಮಾಡು.
  67. put one to silence
    1. ಒಬ್ಬನ ಬಾಯಿ ಮುಚ್ಚಿಸು; ಮೌನಗೊಳಿಸು.
    2. (ರೂಪಕವಾಗಿ) ಒಬ್ಬನ ಸೊಲ್ಲಡಗಿಸು.
    3. (ರೂಪಕವಾಗಿ) ಒಬ್ಬನನ್ನು ಕೊಲ್ಲು.
  68. put one to sleep
    1. ಒಬ್ಬನನ್ನು ನಿದ್ದೆಹೋಗಿಸು.
    2. (ರೂಪಕವಾಗಿ) ಕೊಲ್ಲು.
  69. put one to the $^2$blush.
  70. put one wise (ಅಮೆರಿಕನ್‍ ಪ್ರಯೋಗ, ಅಶಿಷ್ಟ) (ಒಬ್ಬನ ತಪ್ಪು ತಿಳಿವಳಿಕೆಯನ್ನು ತೊಲಗಿಸಿ) ಅವನಿಗೆ ನಿಜ (ಸ್ಥಿತಿ) ತಿಳಿಯುವಂತೆ ಮಾಡು.
  71. put on speed ವೇಗಹೆಚ್ಚಿಸು.
  72. put on $^1$steam.
  73. put (out etc.) heads together
    1. ಪರಸ್ಪರ ಕಲೆತು ಸಮಾಲೋಚಿಸೋಣ.
    2. (ಕ್ರಿಕೆಟ್‍) ಪರಸ್ಪರ ಕೂಡಿ ರನ್ನುಗಳನ್ನು ಸೇರಿಸು, ಪೇರಿಸು.
  74. put out
    1. (ಭುಜ ಮೊದಲಾದವುಗಳ) ಕೀಲು ಸಡಿಲಿಸು.
    2. (ಕ್ರಿಕೆಟ್‍) ಬ್ಯಾಟುಗಾರನನ್ನು ಔಟ್‍ ಮಾಡಿಸು.
    3. (ಮೇಣದ ಬತ್ತಿಯ ಯಾ ಅನಿಲದ ಉರಿ, ಬೆಂಕಿ, ಮೊದಲಾದವನ್ನು) ಆರಿಸು; ನಂದಿಸು.
    4. (ಭಾಷಣಕಾರ, ನಟ, ಮೊದಲಾದವರು ಮುಂದುವರಿಯಲಾಗದಂತೆ ಅವರ ಮನಸ್ಸನ್ನು) ಕಲಕು; ಗೊಂದಲಗೊಳಿಸು; ತಬ್ಬಿಬ್ಬುಮಾಡು.
    5. (ಒಬ್ಬನನ್ನು) ರೇಗಿಸು; ಕೆರಳಿಸು; ಸಿಟ್ಟಿಗೆಬ್ಬಿಸು.
    6. (ಅನೇಕವೇಳೆ ಆತ್ಮಾರ್ಥಕ) (ಒಬ್ಬನಿಗೆ) ಅನನುಕೂಲವುಂಟುಮಾಡು: don’t put yourself out ಅನನುಕೂಲಮಾಡಿಕೊಳ್ಳಬೇಡ.
    7. (ಶಕ್ತಿ ಮೊದಲಾದವನ್ನು) ಹೂಡು; ಪ್ರಯೋಗಿಸು.
    8. (ಹಣವನ್ನು) ಬಡ್ಡಿಗೆ ಸಾಲಕೊಡು ಯಾ ಬಂಡವಾಳವಾಗಿ ಹೂಡು.
    9. ಸ್ಥಳದಿಂದಾಚೆ ಮಾಡುವ ಕೆಲಸಕೊಡು; ಹೊರಗೆಲಸ ಕೊಡು.
  75. put out of $^1$countenance.
  76. put over
    1. ಒಪ್ಪಿಗೆಯಾಗುವಂತೆ ಯಾ ಪ್ರಭಾವಕಾರಿಯಾಗುವಂತೆ ಮಾಡು.
    2. ಅರ್ಥವಾಗುವಂತೆ ಹೇಳು, ತಿಳಿಸು.
    3. (ಅಮೆರಿಕನ್‍ ಪ್ರಯೋಗ) ಮುಂದೂಡು; ಮುಂದಕ್ಕೆ, ಮುಂದಿನ ತೇದಿಯೊಂದಕ್ಕೆ ಹಾಕು.
    4. (ಅಮೆರಿಕನ್‍ ಪ್ರಯೋಗ) ಮೋಸದಿಂದ ಗಿಟ್ಟಿಸು; ವಂಚನೆಯಿಂದ ಪಡೆ, ಸಾಧಿಸು.
  77. put (person) upto
    1. (ವ್ಯಕ್ತಿಗೆ) ತಿಳಿಯಪಡಿಸು; ತಿಳಿಯಹೇಳು.
    2. (ವ್ಯಕ್ತಿಯನ್ನು) ಚಿತಾವಣೆಮಾಡು; ಪ್ರಚೋದಿಸು: put them upto stealing ಕದಿಯಲು ಅವರನ್ನು ಪ್ರಚೋದಿಸು.
  78. put proposal etc. into shape ಸಲಹೆ ಮೊದಲಾದವಕ್ಕೆ ಸರಿಯಾದ ರೂಪ ಕೊಡು.
  79. put something aside
    1. (ಯಾವುದನ್ನಾದರೂ) ಪಕ್ಕಕ್ಕಿರಿಸು; ಬದಿಗಿಡು: put aside the newspaper and take up a book ವೃತ್ತಪತ್ರಿಕೆಯನ್ನು ಬದಿಗಿಟ್ಟು ಪುಸ್ತಕವನ್ನು ಕೈಗೆತ್ತಿಕೊ.
    2. ತರುವಾಯದ ಬಳಕೆಗಾಗಿ (ಹಣವನ್ನು) ತೆಗೆದಿಡು.
    3. ಗಿರಾಕಿ ಆಮೇಲೆ ಬಂದು ತೆಗೆದುಕೊಳ್ಳಲು (ವಸ್ತುವನ್ನು) ತೆಗೆದಿರಿಸು.
    4. ಕಡೆಗಣಿಸು, ಉಪೇಕ್ಷಿಸು ಯಾ ಮರೆತುಬಿಡು: they decided to put aside their difference ತಮ್ಮ ಭಿನ್ನಾಭಿಪ್ರಾಯಗಳನ್ನು ಉಪೇಕ್ಷಿಸಲು ಅವರು ತೀರ್ಮಾನಿಸಿದರು.
  80. put something before (or above) something ಯಾವುದೋ ಒಂದನ್ನು ಬೇರೊಂದಕ್ಕಿಂತ ಹೆಚ್ಚು ಮಹತ್ವದ್ದೆಂದು, ಮುಖ್ಯವಾದುದೆಂದು ಕಾಣು, ಪರಿಗಣಿಸು.
  81. put something on record ವಿಷಯವನ್ನು ದಾಖಲೆ ಮಾಡು, ದಾಖಲೆಯಾಗಿ ಬರೆದಿಡು.
  82. put (something) out of court (ಯಾವುದೇ ವಿಷಯವನ್ನು ಚರ್ಚೆ ಮೊದಲಾದವಕ್ಕೆ) ಅನರ್ಹಗೊಳಿಸು; ಯೋಗ್ಯವಲ್ಲದಂತೆ ಮಾಡು.
  83. put something out of one’s head ಯಾವುದೇ ವಿಷಯವನ್ನು
    1. ಮರೆತುಬಿಡು.
    2. (ಒಬ್ಬನು) ಮರೆಯುವಂತೆ ಮಾಡು.
  84. put something right ಯಾವುದನ್ನೇ ಸರಿಪಡಿಸು.
  85. put the $^1$boot on.
  86. put the case, resolution, etc. to the vote ವಿಷಯ, ಮಸೂದೆ, ಮೊದಲಾದವನ್ನು ವೋಟಿಗೆ ಹಾಕು.
  87. put the case to one ವಿಷಯವನ್ನು ಯಾ ಮೊಕದ್ದಮೆಯನ್ನು ಒಬ್ಬನ ತೀರ್ಮಾನಕ್ಕೆ ಬಿಡು.
  88. put the clock fast ಗಡಿಯಾರವನ್ನು ಮುಂದೆ ಹೋಗುವಂತೆ, ವೇಗವಾಗಿ ನಡೆಯುವಂತೆ ಮಾಡು.
  89. put the lid on.
  90. put the servants on board wages ಆಳುಗಳಿಗೆ ಊಟದ ವೆಚ್ಚದಷ್ಟೇ ಕೂಲಿ ಕೊಡು; ಊಟದ ಖರ್ಚಿನಷ್ಟು ಮಾತ್ರ ವೇತನ ಕೊಡು.
  91. put the wind up (ಅಶಿಷ್ಟ) (ಒಬ್ಬನನ್ನು) ಬೆದರಿಸು; ಹೆದರಿಸು; ಗಾಬರಿಪಡಿಸು.
  92. put through
    1. (ಯಾವುದೇ ಕೆಲಸವನ್ನು) ನೆರವೇರಿಸು; ನಿರ್ವಹಿಸು.
    2. (ಟೆಲಿಹೋನಿನ ವಿನಿಮಯ ಕೇಂದ್ರದ ಮೂಲಕ ಒಬ್ಬನಿಗೆ ಇನ್ನೊಬ್ಬನೊಡನೆ ಮಾತನಾಡಲು) ಸಂಪರ್ಕ ಕಲ್ಪಿಸಿಕೊಡು.
  93. put to $^3$flight.
  94. put together
    1. (ಭಾಗಗಳನ್ನು) ಜೋಡಿಸಿ, ಒಟ್ಟುಗೂಡಿಸಿ ಪೂರ್ಣ (ವಸ್ತುವನ್ನು) ಮಾಡು.
    2. (ಪೂರ್ಣವಸ್ತುವನ್ನು ಮಾಡಲು) ಭಾಗಗಳನ್ನು ಒಟ್ಟುಗೂಡಿಸು, ಸೇರಿಸು.
  95. put $^1$two and two together.
  96. put under (anaesthetic etc.) (ಅರಿವಳಿಕ ಮೊದಲಾದವುಗಳ ಮೂಲಕ) ಪ್ರಜ್ಞೆ ತಪ್ಪಿಸು.
  97. put up
    1. (ಕಟ್ಟಡ) ಕಟ್ಟು; ನಿರ್ಮಿಸು; ಎಬ್ಬಿಸು.
    2. (ಬೆಲೆ) ಏರಿಸು; ಹೆಚ್ಚಿಸು.
    3. (ಒಬ್ಬನನ್ನು ಜೂಜು ಕುದುರೆಯ) ಜಾಕಿಯನ್ನಾಗಿ ನೇಮಿಸು.
    4. (ನಾಟಕವನ್ನು) ರಂಗದ ಮೇಲೆ ತರು, ಪ್ರದರ್ಶಿಸು.
    5. (ಬೇಟೆಯನ್ನು) ಮರೆಯಿಂದ ಎಬ್ಬಿಸು, ಹೊರಡಿಸು.
    6. ಒಂದು ಉದ್ಯಮಕ್ಕೆ ಹಣ ಹೂಡು, ಒದಗಿಸು.
    7. (ದೇವರಿಗೆ ಪ್ರಾರ್ಥನೆಯನ್ನು, ಅಧಿಕಾರಿಗಳಿಗೆ ಅರ್ಜಿಯನ್ನು) ಸಲ್ಲಿಸು; ಒಪ್ಪಿಸು.
    8. ಚುನಾವಣೆಗೆ (ಉಮೇದುವಾರನಾಗಿ) ನಿಲ್ಲು.
    9. (ಚುನಾವಣೆಗೆ ಉಮೇದುವಾರನನ್ನು) ನಿಲ್ಲಿಸು; ಸೂಚಿಸು.
    10. (ಮದುವೆಯ ನಿಶ್ಚಿತಾರ್ಥವನ್ನು) ಪ್ರಕಟಿಸು; ಘೋಷಿಸು.
    11. (ಹರಾಜಿಗಾಗಿ ಯಾ ಸ್ಪರ್ಧೆಯ) ಮಾರಾಟಕ್ಕಾಗಿ ಇಡು.
    12. (ಪಾರ್ಸೆಲ್‍ ಕಟ್ಟಿ ಯಾ ಪೆಟ್ಟಿಗೆ ಮೊದಲಾದವುಗಳಲ್ಲಿ) ಜೋಪಾನವಾಗಿ ಇಡು.
    13. (ಕತ್ತಿಯನ್ನು) ಒರೆಯಲ್ಲಿಡು.
    14. (ಮನುಷ್ಯ, ಕುದುರೆ, ಮೊದಲಾದವಕ್ಕೆ) ವಸತಿ, ಊಟ, ಮೊದಲಾದವನ್ನು ಕಲ್ಪಿಸು, ಏರ್ಪಡಿಸು.
    15. (ಪಥಿಕಗೃಹ ಮೊದಲಾದವುಗಳಲ್ಲಿ) ತಂಗು; ಇಳಿದುಕೊ.
    16. (ಪ್ರಕಟನೆಯನ್ನು) ಪ್ರದರ್ಶಿಸು; ಹಾಕು.
    17. (ಸೂಚನೆ, ಸಲಹೆಯನ್ನು) ಮುಂದಿಡು; ಮಂಡಿಸು.
    18. (ಸಂಚು ಮೊದಲಾದವನ್ನು) ಕಲ್ಪಿಸು; ಹವಣಿಸು.
  98. put up a (good etc.) fight (ಪ್ರತಿಭಟಿಸಲು ಚೆನ್ನಾಗಿ, ಇತ್ಯಾದಿ) ಕಾದು; ಹೋರಾಡು.
  99. put up at (ಒಂದು ಸ್ಥಳದಲ್ಲಿ) ತಂಗು; ಉಳಿದುಕೊ.
  100. put upon (ಆಡುಮಾತು)
    1. ಅನುಚಿತವಾದ ಯಾ ಅತಿಯಾದ ತಗಾದೆ ಮಾಡು.
    2. (ಒಬ್ಬ ವ್ಯಕ್ತಿಯನ್ನು) ಸ್ವಾರ್ಥಕ್ಕಾಗಿ ಬಳಸಿಕೊ.
  101. put up with
    1. (ಅಪಮಾನ, ಕಿರುಕುಳ, ಕಿರುಕುಳಗಾರ, ಮೊದಲಾದವನ್ನು) ತಾಳಿಕೊ; ಸಹಿಸಿಕೊ.
    2. ವಿಧೇಯನಾಗು; ವಶವಾಗು; ಅಧೀನನಾಗು.
  102. put words into a person’s (or one’s) $^1$mouth.
  103. to be hard put to ಮಾಡಲು ತೀರ ಕಷ್ಟವಾಗು: I was hard put to it to keep them off ಅವರನ್ನು ದೂರ ಇಡಲು, ಹತ್ತಿರ ಸುಳಿಯದಂತೆ ಇರಿಸಲು, ನನಗೆ ತೀರ ಕಷ್ಟವಾಯಿತು.
  104. to be put to something ಮಾಡಲೇಬೇಕಾಗು; ಮಾಡಲೇ ಬೇಕಾದ ಪರಿಸ್ಥಿತಿಯೊದಗು: it is surprising what we can do when we are put to it ಮಾಡಲೇಬೇಕಾದ ಪರಿಸ್ಥಿತಿಯೊದಗಿದಾಗ ನಾವೇನು ಮಾಡಬಲ್ಲೆವೆಂಬುದನ್ನು ನೋಡಿದರೆ ನಿಜಕ್ಕೂ ಆಶ್ಚರ್ಯಕರ.
  105. to be put upon ಒಬ್ಬನ ವಂಚನೆಗೆ ತುತ್ತಾಗು, ಬಲಿಯಾಗು: don’t be put upon by him ಅವನ ವಂಚನೆಗೆ ಬಲಿಯಾಗದಿರು.