See also 2phase
1phase ಹೆಸ್‍
ನಾಮವಾಚಕ
  1. (ಚಂದ್ರನ ಯಾ ಯಾವುದೇ ಗ್ರಹದ ವಿಷಯದಲ್ಲಿ) ಕಲೆ; ಸೂರ್ಯನ ಪ್ರಕಾಶದಿಂದ ಬೆಳಗಿರುವ ಅಂಶ ಯಾ ದೃಶ್ಯಭಾಗ (ಮುಖ್ಯವಾಗಿ ಅಮಾವಾಸ್ಯೆ, ಪ್ರಥಮ ದ್ವಿತೀಯ ಪಾದಗಳು (first quarter), ತೃತೀಯ ಚತುರ್ಥ ಪಾದಗಳು (last quarter), ಮತ್ತು ಪೂರ್ಣಿಮೆಗಳ ಅಷ್ಟಮೀ ಚಂದ್ರ).
  2. (ವ್ಯತ್ಯಾಸದ ಯಾ ಬೆಳವಣಿಗೆಯ) ಮಜಲು; ಮೆಟ್ಟಲು; ಸ್ಥಿತಿ; ಹಂತ; ಅವಸ್ಥೆ: the adolescent phase of man ಮನುಷ್ಯನ ತಾರುಣ್ಯಾವಸ್ಥೆ.
  3. (ಪರಿಸ್ಥಿತಿಯ ಯಾ ಪ್ರಶ್ನೆಯ) ಮುಖ; ದೃಷ್ಟಿ; ಅಂಶ: this is only one phase of the question ಇದು ಪ್ರಶ್ನೆಯ ಒಂದು ಮುಖ ಮಾತ್ರ.
  4. (ಭೌತವಿಜ್ಞಾನ) ಅವಸ್ಥೆ; ಆವರ್ತನೀಯವಾಗಿ ಚಲಿಸುವ ಯಾ ಬದಲಾಯಿಸುವ ಯಾವುದೇ ಪ್ರಕ್ರಿಯೆಯಲ್ಲಿ (ಮುಖ್ಯವಾಗಿ ಪರ್ಯಾಯ ವಿದ್ಯುತ್ಪ್ರವಾಹದಲ್ಲಿ) ನಿರ್ದಿಷ್ಟ ಹಂತ, ಮಜಲು.
  5. (ಮುಖ್ಯವಾಗಿ ತಾರುಣ್ಯದ) ಕಷ್ಟವಾದ ಯಾ ದುಃಖದ – ಅವಧಿ, ಮಜಲು, ಹಂತ.
  6. (ರಸಾಯನವಿಜ್ಞಾನ) ಪ್ರಾವಸ್ಥೆ; ಭಿನ್ನಜಾತ್ಯ (heterogeneous) ವ್ಯವಸ್ಥೆಯೊಂದರಲ್ಲಿ ಯಾಂತ್ರಿಕವಾಗಿ ಇತರ ಭಾಗಗಳಿಂದ ಪ್ರತ್ಯೇಕಿಸುವಂತಿರುವ, ಆಂತರಿಕವಾಗಿ ಸಮಜಾತ್ಯ(homogeneous)ವಾಗಿರುವ ಪ್ರತ್ಯೇಕ ಭಾಗ.
  7. (ಖಗೋಳ ವಿಜ್ಞಾನ) ಕಲೆ; ಯಾವುದೇ ಆಕಾಶಕಾಯದ ರೂಪ ಆವರ್ತೀಯವಾಗಿ ವ್ಯತ್ಯಾಸಗೊಳ್ಳುತ್ತಿದ್ದರೆ, ಅದರ ಯಾವುದೇ ನಿರ್ದಿಷ್ಟ ಹಂತ.
  8. ಪ್ರಾಣಿಯ ಸಹಜವಾದ ಯಾ ಕಾಲಾನುವರ್ತಿಯಾಗಿ ಬದಲಾಗುವ ಬಣ್ಣ ಮೊದಲಾದವು; ಆನುವಂಶಿಕ ಯಾ ಕಾಲಾನುವರ್ತಿ ವರ್ಣ ಮೊದಲಾದವು.
ಪದಗುಚ್ಛ
  1. in phase ಸಮಾನ ಕಲೆಯಲ್ಲಿ; ಸಮಾನ ಕ್ಷಣದಲ್ಲಿ ಸಮಾನ ಕಲೆಯಲ್ಲಿರುವ.
  2. out of phase ಕಲೆತಪ್ಪಿ; ಸಮಾನಕ್ಷಣದಲ್ಲಿ ಸಮಾನ ಕಲೆಯಲ್ಲಿಲ್ಲದೆ.
  3. phase in (or out) ಕ್ರಮೇಣಬಳಕೆ ತರು (ಯಾ ಬಳಕೆ ತಪ್ಪಿಸು).
  4. three-phase (ವಿದ್ಯುಜ್ಜನಕ, ಮೋಟಾರು, ಇತ್ಯಾದಿಗಳ ವಿಷಯದಲ್ಲಿ) ತ್ರಿವಳಿಯ; ಮೂರು ಹಂತದ; ವಿದ್ಯುತ್‍ ಸರಬರಾಜು ಯಾ ಬಳಕೆಯಲ್ಲಿ ಒಂದೇ ವೋಲ್ಟತೆಯಲ್ಲಿರುವ, ಆದರೆ ಮೂರನೆಯ ಒಂದು ಅವಸ್ಥೆ ವ್ಯತ್ಯಾಸವಿರುವ ಮೂರು ಪರ್ಯಾಯ ವಿದ್ಯುತ್‍ ಪ್ರವಾಹಗಳನ್ನೊಳಗೊಂಡ.