See also 1mock  3mock
2mock ಮಾಕ್‍
ಗುಣವಾಚಕ
  1. ಹುಸಿಯಾದ; ನಿಜವಲ್ಲದ; ಆಭಾಸಿಕ; ಬರಿಯ ತೋರ್ಕೆಯ; ನಿಜವಾದದ್ದೆಂಬಂತೆ ಕಾಣುವ, ತೋರುವ.
  2. (ಮುಖ್ಯವಾಗಿ ಮೋಸ ಮಾಡುವ ಉದ್ದೇಶವಿಲ್ಲದ) ನಟನೆಯ; ಸೋಗಿನ.
  3. ನಟನೆಯ; ನಿಜವಲ್ಲದ; ಹುಸಿಯಾದ: mock battle ಹುಸಿಕದನ; ಯುದ್ಧದ ನಟನೆ.
ಪದಗುಚ್ಛ
  1. mock duck ಹುಸಿ ಬಾತಿನ ಮಾಂಸ; ಬಾತಿನ ಮಾಂಸವನ್ನು ಹೂರಣವಾಗಿ ಇಟ್ಟಿರುವ ಹಂದಿ ಮಾಂಸ.
  2. mock goose = ಪದಗುಚ್ಛ\((1)\).
  3. mock moon = paraselene.
  4. mock orange ಬಿಳಿ ಹೂ ಬಿಡುವ, ಹಿಲಡೆಲಸ್‍ ಕಾರೊನೇರಿಯಸ್‍ ಕುಲದ, ಕಟು ವಾಸನೆಯ ಒಂದು ಪೊದೆ.
  5. mock sun = parhelion.
  6. mock turtle soup (ಕಡಲಾಮೆಯದರಂತೆ ತೋರಲು ಕರುವಿನ ತಲೆ ಮೊದಲಾದವುಗಳನ್ನು ಬಳಸಿ ತಯಾರಿಸಿದ) ಹುಸಿ ಕಡಲಾಮೆಯ ಎಸರು, ಸಾರು.