mixture ಮಿಕ್ಸ್‍ಚರ್‍
ನಾಮವಾಚಕ
  1. ಮಿಶ್ರಣ; ಬೆರಕೆ:
    1. ಬೆರಸುವುದು; ಬೆರಕೆ ಮಾಡುವುದು.
    2. ಬೆರಕೆ ಮಾಡಿದ್ದು.
  2. ಸ್ಫೋಟಕ ಮಿಶ್ರಣ; ಅಂತರ್ದಹನ ಎಂಜಿನ್ನಿನಲ್ಲಿ, ವಾಯುವಿನೊಡನೆ ಅನಿಲ ಯಾ ಎಣ್ಣೆಯ ಹನಿ ಬೆರೆತು ರೂಪುಗೊಳ್ಳುವ ಸ್ಫೋಟಕ.
  3. (ರಸಾಯನವಿಜ್ಞಾನ) ಮಿಶ್ರಣ; ಯಾವುದೇ ಪದಾರ್ಥಗಳು ಪರಸ್ಪರ ರಾಸಾಯನಿಕ ಕ್ರಿಯೆಗೊಳಗಾಗದೆ ಸಂಪೂರ್ಣವಾಗಿ ಬೆರೆತುಕೊಂಡಿರುವಂಥ ಉತ್ಪಾದನೆ.
  4. (ಒಂದು ವಸ್ತುವನ್ನು ತಯಾರಿಸಲು ಕೆಲವು ವಸ್ತುಗಳನ್ನು ಬೆರೆಸಿದ) ಮಿಶ್ರಣ, ಔಷಧ: cough mixture ಕೆಮ್ಮಲು ಮಿಶ್ರಣ, ಮುಖ್ಯವಾಗಿ ಔಷಧಿ.
  5. ಬೆರಕೆ; ಮಿಶ್ರಣ; ಸಂಕರ; ಹಲವು ಗುಣಗಳ ಸಂಗಮವೆಂದು ಭಾವಿಸಲಾದ ವ್ಯಕ್ತಿ.
ಪದಗುಚ್ಛ
  1. mechanical mixture (ಸಹಜ ಗುಣಗಳು ಮಾರ್ಪಡದೆ ಬೆರೆಯುವ ಎರಡು ಪದಾರ್ಥಗಳ) ಭೌತ ಮಿಶ್ರಣ (chemical combination ಎಂಬುದಕ್ಕೆ ವ್ಯತಿರಿಕ್ತ ಪದ).
  2. the mixture as before ಮತ್ತೆ ನೀಡಿದ ಅದೇ ಔಷಧಿ ಯಾ ಮತ್ತೆ ಮಾಡಿದ ಹಿಂದಿನ ಔಷಧೋಪಚಾರ.