judgement ಜಜ್‍ಮಂಟ್‍
ನಾಮವಾಚಕ
  1. (ನ್ಯಾಯಾಲಯದ, ನ್ಯಾಯಾಧೀಶನ) ತೀರ್ಪು; ಕೋರ್ಟಿನ ತೀರ್ಮಾನ, ನಿರ್ಣಯ.
  2. ದೈವಶಾಪ; ದೈವ ಶಿಕ್ಷೆ; ಭಗವಂತನ ಅಸಮಾಧಾನದ ಫಲವೆಂದು ಭಾವಿಸುವ ಕೇಡು, ದುರದೃಷ್ಟ, ಸಂಕಟ, ವಿಪತ್ತು (ಕೆಲವೊಮ್ಮೆ ಹಾಸ್ಯ ಪ್ರಯೋಗ): it is a judgement on you for getting up late ಹೊತ್ತಾಗಿ ಎದ್ದ ತಪ್ಪಿಗಾಗಿ ನಿನಗೆ ಭಗವಂತ ಕೊಟ್ಟ ಶಿಕ್ಷೆ.
  3. ಟೀಕೆ; ಖಂಡನೆ.
  4. ಅಭಿಪ್ರಾಯ; ಭಾವನೆ: in my judgement ನನ್ನ ಅಭಿಪ್ರಾಯದಲ್ಲಿ, ಭಾವನೆಯಲ್ಲಿ.
  5. ವಿಮರ್ಶನ ಶಕ್ತಿ; ವಿವೇಚನ ಶಕ್ತಿ.
  6. ವಿವೇಚನೆ; ಔಚಿತ್ಯ ಪ್ರಜ್ಞೆ; ಯುಕ್ತಾಯುಕ್ತ ಪರಿಜ್ಞಾನ.
ಪದಗುಚ್ಛ
  1. against one’s better judgement ತನ್ನ ವಿವೇಚನೆಗೆ ವ್ಯತಿರಿಕ್ತವಾಗಿ; ತನ್ನ ಯುಕ್ತಾಯುಕ್ತ – ವಿವೇಕಕ್ಕೆ, ಪರಿಜ್ಞಾನಕ್ಕೆ, ವಿರುದ್ಧವಾಗಿ.
  2. day of judgement (also Judgement Day) ಅಂತಿಮ ತೀರ್ಪಿನ ದಿನ; ಪ್ರಲಯದ ತರುವಾಯ ದೇವರು ನಡೆಸುವ ಮಹಾವಿಚಾರಣೆಯ ದಿನ.
  3. Judgement of Paris (ಗ್ರೀಕ್‍ ಪುರಾಣ) ಪ್ಯಾರಿಸನ ತೀರ್ಪು; ಸೌಂದರ್ಯ ಸ್ಪರ್ಧೆಯಲ್ಲಿ ಪ್ಯಾರಿಸನು ಚಿನ್ನದ ಸೇಬನ್ನು ಅಹ್ರೊದಿತೆಗೆ ಕೊಟ್ಟಿದ್ದು (ಇದು ಹೆಲೆನಳ ಅಪಹರಣಕ್ಕೆ, ಅದರಿಂದಾಗಿ ಟ್ರೋಜನ್‍ ಯುದ್ಧಕ್ಕೆ ಕಾರಣವಾಯಿತು).
  4. $^1$sit in judgement (ಇತರರ ಮೇಲೆ) ವಿಮರ್ಶೆಗೆ ಕೂರು; (ಇತರರನ್ನು, ಇತರರ ಗುಣದೋಷಗಳನ್ನು) ಟೀಕಿಸು; ದೂಷಿಸು; ಇತರರ ಯೋಗ್ಯತೆ, ನಡತೆ, ಮೊದಲಾದವುಗಳನ್ನು ನಿರ್ಣಯಿಸಿ ತೀರ್ಪು ಕೊಡುವ ಅಧಿಕಾರವನ್ನು ವಹಿಸು.
  5. the Last Judgement ಅಂತಿಮ ತೀರ್ಪು; (ಎಲ್ಲ ಜೀವರುಗಳಿಗೂ ಅವರ ಐಹಿಕ ಜೀವನದಲ್ಲಿ ಮಾಡಿದ ಪಾಪ ಪುಣ್ಯಗಳಿಗೆ ತಕ್ಕಂತೆ) ಪ್ರಪಂಚದ ಅಂತ್ಯದಲ್ಲಿ ದೇವರು ನೀಡುವ ಮಹಾ ತೀರ್ಮಾನ.