See also 2dean
1dean ಡೀನ್‍
ನಾಮವಾಚಕ
  1. ಡೀನು:
    1. (ದೊಡ್ಡ ಚರ್ಚಿನ ಯಾ ಕ್ರೈಸ್ತ ಸಂನ್ಯಾಸಿ ಮಂಡಲಿಯ) ಮುಖ್ಯಾಧಿಕಾರಿ.
    2. (ಬ್ರಿಟಿಷ್‍ ಪ್ರಯೋಗ) ಉಸ್ತುವಾರಿ ಪಾದ್ರಿ; ಪ್ರಾಂತೀಯ ಪಾದ್ರಿ: ಆರ್ಚ್‍ ಡೀಕನ್ನನ ಅಧೀನಕ್ಕೊಳಪಡುವ, ಒಂದು ಪ್ರಾಂತಕ್ಕೆ ಸೇರಿದ ಪಾದ್ರಿಗಳ ಮೇಲೆ ಮೇಲ್ವಿಚಾರಣೆ ನಡೆಸುವ ಪಾದ್ರಿ.
    3. (ಕಾಲೇಜು) ಮುಖ್ಯಾಧಿಕಾರಿ; ಕಾಲೇಜಿನಲ್ಲೇ ವಾಸವಾಗಿದ್ದು ವಿದ್ಯಾರ್ಥಿಗಳ ಶಿಸ್ತು ಮತ್ತು ಮೇಲ್ವಿಚಾರಣೆ ನೋಡಿಕೊಳ್ಳುವವ.
    4. (ವಿಶ್ವವಿದ್ಯಾನಿಲಯದ ಒಂದು ವಿಷಯ ವಿಭಾಗದ) ಮುಖ್ಯಸ್ಥ.
    5. (ಯಾವುದೇ ಮಂಡಲಿಯ) ಹಿರಿಯ; ಪ್ರಮುಖ.
  2. = doyen.
ಪದಗುಚ್ಛ
  1. Dean of Faculty
    1. (ಸ್ಕಾಟ್ಲಂಡ್‍) ವಕೀಲ ಸಂಘದ ಅಧ್ಯಕ್ಷ.
    2. ವಿಭಾಗ ಮುಖ್ಯ(ಸ್ಥ): ವಿಶ್ವವಿದ್ಯಾನಿಲಯದ ಮಾನವಿಕ, ವಿಜ್ಞಾನ, ಮೊದಲಾದ ವಿಭಾಗಗಳ ಮುಖ್ಯಸ್ಥ.
  2. rural dean (ಬ್ರಿಟಿಷ್‍ ಪ್ರಯೋಗ) = 1dean.