corridor ಕಾರಿಡಾರ್‍
ನಾಮವಾಚಕ
  1. ನಡವೆ; ಚಾವಡಿದಾರಿ; ಕಾರಿಡಾರು; ದೊಡ್ಡ ಕಟ್ಟಡದಲ್ಲಿಯ ಹಲವು ಕೋಣೆಗಳಿಗೆ ಪ್ರವೇಶ ಕೊಡುವ ಮುಖ್ಯ ಮಾರ್ಗ.
  2. ಕಟ್ಟಡದ (ಬೇರೆಬೇರೆ ಭಾಗಗಳಿಗೆ ಪ್ರವೇಶ ಕೊಡುವ) ಹೊರದಾರಿ.
  3. ಚಾವಣಿ ದಾರಿ; ಎರಡು ಸ್ಥಳಗಳನ್ನು ಸೇರಿಸುವ, ಚಾವಣಿಯುಳ್ಳ ಯಾ ಮಾಡಿನ ದಾರಿ.
  4. (ಒಂದು ಕಟ್ಟಡದ) ಒಳಾಂಗಣದ ಸುತ್ತಲೂ ಇರುವ ದಾರಿ.
  5. (ಶಾಸನಸಭಾಭವನದ ಸುತ್ತಲೂ ಇರುವ) ಕೈಸಾಲೆ.
  6. (ರಾಜನೀತಿಶಾಸ್ತ್ರ) ಓಣಿ; ಪರರಾಷ್ಟ್ರದ ಮೂಲಕ ಹಾಯ್ದು, ಸಮುದ್ರ ಮೊದಲಾದವಕ್ಕೆ ಹಾದಿಕೊಡುವ, ಒಂದು ರಾಷ್ಟ್ರದ–ಭೂಪಟ್ಟಿ, ಚಾಚುಪಟ್ಟಿ.
  7. (ರಕ್ಷಿತ ಪ್ರದೇಶಗಳ ಸುತ್ತಲೂ ಇರುವ) ಮುಚ್ಚುದಾರಿ.
  8. ಓಣಿ; ನಡವೆ; ರೈಲುಗಾಡಿಯಲ್ಲಿ ಪ್ರತಿಯೊಂದು ಕಂಪಾರ್ಟ್‍ಮಂಟಿಗೂ ಪ್ರವೇಶ ಕೊಡುವ ಮಾರ್ಗ.
  9. (ವಿಮಾನಗಳಿಗೆ ನಿಗದಿಪಡಿಸಿರುವ) ವಾಯುಮಾರ್ಗ.
ನುಡಿಗಟ್ಟು

corridors of power ಪ್ರಭಾವವಲಯಗಳು; ಸರ್ಕಾರೀ ಕೆಲಸಗಳಲ್ಲಿ ಗುಪ್ತವಾದ ಪ್ರಭಾವ ಬೀರುವ ಸ್ಥಳಗಳು.