See also 2collar
1collar ಕಾಲರ್‍
ನಾಮವಾಚಕ
  1. (ಅಂಗಿ, ಷರ್ಟು, ಮೊದಲಾದವುಗಳ) ಕೊರಳುಪಟ್ಟಿ; ಕಾಲರು; ಕತ್ತುಪಟ್ಟಿ; ಕುತ್ತಿಗೆ ಪಟ್ಟಿ.
  2. ಪೋಷಾಕಿನ ಮೇಲುತುದಿಗೆ ಹೊಲಿಯುವ ಕಸೂತಿ, ಕಲಾಬತ್ತು, ಮೊದಲಾದವುಗಳ ಅಲಂಕರಣಪಟ್ಟಿ.
  3. (ಬ್ರಿಟಿಷ್‍ ಪ್ರಯೋಗ) (ನೈಟ್‍ ಪದವಿಯ ಕುರುಹಾದ) ಕೊರಳ ಸರ.
  4. ನಾಯಿಯ ಯಾ ಕೈದಿಯ, ಚರ್ಮದ ಯಾ ಲೋಹದ ಕೊರಳಪಟ್ಟಿ.
  5. ಕೊರಳದಂಡೆ; ಸುರುಳಿಪಟ್ಟಿ; ಕುದುರೆಯ ಕತ್ತಿನ ಮೇಲೆ ಬೀಳುವ ಭಾರವನ್ನು ವಹಿಸುವ ಸುರುಳಿಪಟ್ಟಿ.
  6. ತಡೆಪಟ್ಟಿ; ಕೂಡು–ಪಟ್ಟಿ, ಬಳೆ, ಕೊಳವೆ ಮೊದಲಾದವು; ಸಂಯೋಜಕ ಪಟ್ಟಿ; ನಿರೋಧಕ ಪಟ್ಟಿ; ಯಂತ್ರ ಮೊದಲಾದವುಗಳಲ್ಲಿ ಚಲನೆಯನ್ನು ತಡೆಯುವ ಯಾ ಯಂತ್ರಭಾಗಗಳನ್ನು ಕೂಡಿಸುವ ಪಟ್ಟಿ, ಬಳೆ, ಕೊಳವೆ, ಮೊದಲಾದವು.
  7. ಗಾಳದ ಪಟ್ಟಿ; ಹಲವು ಗಾಳದ ನೊಣಗಳನ್ನು ಬಿಗಿವ ಒಂದು ವಿಧಾನ.
  8. (ಪ್ರಾಣಿಗಳ ಯಾ ಪಕ್ಷಿಗಳ ವಿಷಯದಲ್ಲಿ) ಕೊರಳ ಪಟ್ಟಿ; ಕೊರಲ ಗೆರೆ; ಕತ್ತಿನ ಸುತ್ತಲೂ ಇರುವ ಬಣ್ಣದ–ಗೆರೆ, ಪಟ್ಟಿ.
  9. (ಬ್ರಿಟಿಷ್‍ ಪ್ರಯೋಗ) ಸುರುಳಿ ಮಾಡಿದ–ಮಾಂಸದ ಚೂರು, ಊರಿಟ್ಟ ಹಂದಿಯ ಮಾಂಸ, ಮೀನು.
  10. (ಗಣಿಗಾರಿಕೆ) ಗಣಿಕಂಠ; ಗಣಿಕಟ್ಟೆ; ಗಣಿಯ ಬಾಯಿಯ ಸುತ್ತಣ ಕಟ್ಟೆ.
  11. (ಸಸ್ಯವಿಜ್ಞಾನ) ಕತ್ತು; ಕಂಠ; ಕುತ್ತಿಗೆ; ಸಸ್ಯದ ಕಾಂಡ ಮತ್ತು ಬೇರುಗಳು ಸೇರುವ ಭಾಗ.
ಪದಗುಚ್ಛ
  1. collar of bacon (ಬ್ರಿಟಿಷ್‍ ಪ್ರಯೋಗ) ಹಂದಿಯ ಕತ್ತಿನ ಮಾಂಸ; ಉಪ್ಪಿನಲ್ಲಿ ಊರಿಟ್ಟ ಹಂದಿಯ ಕತ್ತಿನ ಹತ್ತಿರದ ಮಾಂಸ.
  2. collar of SS or esses (ಬ್ರಿಟಿಷ್‍ ಪ್ರಯೋಗ) (ಚರಿತ್ರೆ) SS ಅಕ್ಷರಗಳನ್ನೇ ಮಾಲೆಯಾಗಿ ಜೋಡಿಸಿ ಮಾಡಿರುವ (ಈಗಲೂ ಕೆಲವು ವರಿಷ್ಠ ಅಧಿಕಾರಿಗಳ ಪೋಷಾಕಿನ ಅಂಗವಾಗಿರುವ) ಲ್ಯಾಂಕಾಸ್ಟರ್‍ ಮನೆತನದ ಲಾಂಛನ.
ನುಡಿಗಟ್ಟು
  1. against the collar (ಕೆಲಸದ ವಿಷಯದಲ್ಲಿ) ಗೋಣು ಮುರಿಯುವ; ಬಹಳ ಕಷ್ಟದಿಂದ ಮಾಡಬೇಕಾದ; ಬಹಳ ಶ್ರಮಪಟ್ಟು ನಿರ್ವಹಿಸಬೇಕಾದ.
  2. $^1$hot under the collar.
  3. $^1$grin through a horse-collar.