See also 2cheer
1cheer ಚಿಅರ್‍
ನಾಮವಾಚಕ
  1. ಮನೋಭಾವ; ಮನಃಸ್ಥಿತಿ; ಮನಸ್ಸು; ಚಿತ್ತವೃತ್ತಿ.
  2. ಆಹಾರ; ತಿಂಡಿ; ಉಣಿಸು; ಭೋಜನ; ಖಾನ: make good cheer ಚೆನ್ನಾಗಿ ಊಟ ಮಾಡು; ಸುಖಭೋಜನ ಮಾಡು.
  3. (ಸಾಮಾನ್ಯವಾಗಿ ಬಹುವಚನದಲ್ಲಿ) ಜಯಕಾರ; ಉಘೇ; ಜಯಘೋಷ; ಹುರುಪಿನ ಕೂಗು: three cheers (ಒಬ್ಬ ವ್ಯಕ್ತಿಗಾಗಲಿ, ಒಂದು ವಸ್ತುವಿಗಾಗಲಿ ಗೌರವ ತರಲು ಜನಸಂದಣಿಯು ಎಡೆಬಿಡದೆ ಮೂರು ಸಾರಿ ಮಾಡುವ) ಜಯಕಾರ: ಜೈ! ಜೈ! ಜೈ!; ಉಘೇ! ಉಘೇ! ಉಘೇ!
  4. ಗೆಲವು; ಹರ್ಷ; ಉಲ್ಲಾಸ.
  5. ಸಮಾಧಾನ; ಸಾಂತ್ವನ.
  6. ಉತ್ತೇಜನ; ಪ್ರೋತ್ಸಾಹ; ಹುಮ್ಮಸ್ಸು; ಹುರುಪು.
  7. (ಬಹುವಚನದಲ್ಲಿ) (ಆಡುಮಾತು) = cheerio.
ಪದಗುಚ್ಛ
  1. be of good cheer ಗೆಲವಾಗಿರು; ಹೆದರಬೇಡ; ಅಳುಕದಿರು; ಧೈರ್ಯವಾಗಿರು; ನಿರಾಶನಾಗಬೇಡ.
  2. what cheer? ಹೇಗಿದ್ದೀಯೆ? ಚೆನ್ನಾಗಿದ್ದೀಯಾ? ಕ್ಷೇಮವೆ?
ನುಡಿಗಟ್ಟು
  1. the fewer the better cheer ಜನ ಕಡಿಮೆಯಾದಷ್ಟೂ ಪಾಲು ಹೆಚ್ಚು, ಔತಣ ಜೋರು.
  2. two cheers (ವ್ಯಂಗ್ಯವಾಗಿ) ಮಂದ ಉತ್ಸಾಹ.
  3. with good cheer ಸಂತೋಷವಾಗಿ; ಒಪ್ಪಿಗೆಯಿಂದ; ಇಚ್ಛೆಯಿಂದ: she accepted her lot with good cheer ಅವಳು ತನ್ನ ಅದೃಷ್ಟವನ್ನು ಸಂತೋಷದಿಂದ ಒಪ್ಪಿಕೊಂಡಳು.