chamberlain ಚೇಂಬರ್ಲಿನ್‍
ನಾಮವಾಚಕ
  1. ದೊರೆಯ ಮನೆವಾರ್ತೆಗಾರ; ಪಾರುಪತ್ಯಗಾರ; ಅರಮನೆ ಗುರಿಕಾರ; ರಾಜನ ಯಾ ಶ್ರೀಮಂತನ ಮನೆವಾರ್ತೆ ನೋಡಿಕೊಳ್ಳುವ ಅಧಿಕಾರಿ.
  2. (ಸಂಘಸಂಸ್ಥೆಗಳ) ಕೋಶಾಧ್ಯಕ್ಷ; ಖಜಾಂಚಿ.
ಪದಗುಚ್ಛ
  1. Lord Great Chamberlain (of England) (ಬ್ರಿಟಿಷ್‍ ಪ್ರಯೋಗ) (ಇಂಗ್ಲಂಡಿನ) ದರ್ಬಾರು ಬಕ್ಷಿ; ರಾಜನ ಮತ್ತು ಆಸ್ಥಾನದ ಎಲ್ಲಾ ಸಂಪ್ರದಾಯಗಳ ಉಸ್ತುವಾರಿ ನೋಡಿಕೊಳ್ಳುವ, ವಂಶಪಾರಂಪರ್ಯ ಅಧಿಕಾರವುಳ್ಳ, ಇಂಗ್ಲಂಡಿನ ಒಬ್ಬ ಹಿರಿಯ ಅಧಿಕಾರಿ.
  2. Lord Chamberlain (of the Household) (ಬ್ರಿಟಿಷ್‍ ಪ್ರಯೋಗ) ಅರಮನೆಯ ಪಾರುಪತ್ಯಗಾರ; ಆಡಳಿತದ ಮೇಲುಸ್ತುವಾರಿ ನೋಡಿಕೊಳ್ಳುವ, ಹಿಂದೆ ನಾಟಕ ಪ್ರದರ್ಶನಗಳಿಗೆ ಅನುಮತಿ ಕೊಡುತ್ತಿದ್ದ ಅಧಿಕಾರಿ.