See also 1call
2call ಕಾಲ್‍
ನಾಮವಾಚಕ
  1. ಕೂಗುವಿಕೆ; ಕರೆ(ಯುವಿಕೆ); ಕೂಗಿ ಕರೆಯುವಿಕೆ.
  2. (ಹಕ್ಕಿ, ಮೃಗ ಮೊದಲಾದವುಗಳ) ಉಲಿ; ಕಿರುಚು; ಕೂಗು; ಕೂಜನ.
  3. ಉಲಿ; ಪಕ್ಷಿ ಮೊದಲಾದವುಗಳ ಕೂಗಿನ ಅನುಕರಣೆ.
  4. ಉಲಿವಾದ್ಯ; ಹಕ್ಕಿ ಮೊದಲಾದವುಗಳ ಕೂಗನ್ನು ಅನುಕರಿಸಿ ಅವುಗಳನ್ನು ಆಕರ್ಷಿಸುವ ವಾದ್ಯ.
  5. (ಕಹಳೆ ಮೊದಲಾದವುಗಳ ಮೂಲಕ ಕೊಡುವ) ಸಂಕೇತ; ಸೂಚನೆ; ಸೀಟಿ; ಸಿಳ್ಳು.
  6. (ಸಂಕೇತ, ಸೂಚನೆ ಕೊಡುವ) ಸಿಳ್ಳು; ಸೀಟಿ; ಶಿಲ್ಪಿ.
  7. (ಸ್ವಲ್ಪ ಸಮಯದ, ಮುಖ್ಯವಾಗಿ ಔಪಚಾರಿಕ) ಭೇಟಿ:pay a call ಭೇಟಿ ಕೊಡು.
  8. (ಮೆಚ್ಚುಗೆ ಸ್ವೀಕರಿಸಲು, ಯಾ ಪೂರ್ವಾಭ್ಯಾಸಕ್ಕೆ, ಪ್ರದರ್ಶನಕ್ಕೆ ಯಾ ರಂಗಸ್ಥಳಕ್ಕೆ ಬರಬೇಕೆಂದು ನಟನಿಗೆ, ನ್ಯಾಯವೃತ್ತಿ ಅವಲಂಬಿಸಲು ವಕೀಲನಿಗೆ, ದೇವರಿಂದ ಯಾ ಭಕ್ತವೃಂದದಿಂದ ಯಾ ಆತ್ಮಸಾಕ್ಷಿಯಿಂದ ವ್ಯಕ್ತಿಗೆ ಪಾದ್ರಿಯಾಗಲು ಕೊಡುವ) ಕರೆ; ಆಹ್ವಾನ; ಆಮಂತ್ರಣ.
  9. ಆವಶ್ಯಕತೆ; ಅಗತ್ಯ; ಪ್ರಮೇಯ; ಸಂದರ್ಭ: no call to blush ನಾಚಿಕೊಳ್ಳಬೇಕಾದ ಅಗತ್ಯವಿಲ್ಲ.
  10. (ಮುಖ್ಯವಾಗಿ ಹಣದ ಬಾಕಿಗಾಗಿ) ತಗಾದೆ; ಒತ್ತಾಯ; ಬಲಾತ್ಕಾರ.
  11. (ಇಸ್ಪೀಟು)
    1. ಸವಾಲು (ಮಾಡಲು ಆಟಗಾರನ) ಹಕ್ಕು ಯಾ ಸರದಿ.
    2. (ಹೀಗೆ ಮಾಡಿದ) ಸವಾಲು ಮೊದಲಾದವು.
  12. ಕಾಲ್‍; ಕರೆ:
    1. ಟೆಲಿಹೋನು ಮಾಡುವಿಕೆ; ಟೆಲಿಹೋನಿನಲ್ಲಿ ಮಾತನಾಡುವಿಕೆ.
    2. ಟೆಲಿಹೋನಿನಲ್ಲಿ ಮಾತನಾಡಬೇಕೆಂಬ ಕರೆ; ಟೆಲಿಹೋನು ಕರೆ.
    3. ಟೆಲಿಹೋನು–ಸಂಭಾಷಣೆ, ಮಾತುಕತೆ.
  13. (ಷೇರು ವ್ಯಾಪಾರ) ವಾಪಸುಹಕ್ಕು; ಗೊತ್ತಾದ ತಾರೀಖಿನಲ್ಲಿ ಷೇರು ಪತ್ರಗಳನ್ನು ವಾಪಸು ಪಡೆಯುವ ಹಕ್ಕು.
ನುಡಿಗಟ್ಟು
  1. at call
    1. (ಬೇಕಾದಾಗ ಯಾ ಅಗತ್ಯವಾದಾಗ) ಸಿದ್ಧವಾಗಿ; ತಯಾರಾಗಿ; ಸಿಗುವಂತೆ.
    2. (ಸಾಲ ಕೊಟ್ಟ ಹಣದ ವಿಷಯದಲ್ಲಿ) ಕೇಳಿದಾಗ–ಪಾವತಿ ಮಾಡುವ, ವಾಪಸು ಮಾಡುವ, ಹಿಂದಕ್ಕೆ ಕೊಡುವ, ಹಿಂದಿರುಗಿಸುವ.
  2. within call ಕೂಗಳತೆಯಲ್ಲಿ; ಕೂಗಿದರೆ ಕೇಳುವಷ್ಟು ಹತ್ತಿರದಲ್ಲಿ; ಕರೆದಾಗ ಯಾ ಹೇಳಿಕಳುಹಿಸಿದಾಗ ಬರುವಷ್ಟು ಹತ್ತಿರದಲ್ಲಿ.
  3. on call = ನುಡಿಗಟ್ಟು \((1)\).
  4. pay a call
    1. ಭೇಟಿಕೊಡು.
    2. (ಆಡುಮಾತು) ಕಕ್ಕಸಿಗೆ ಭೇಟಿಕೊಡು.