See also 2between
1between ಬಿಟ್ವೀನ್‍
ಉಪಸರ್ಗ
  1. ಎರಡರಲ್ಲಿ; ಎರಡರ ಪೈಕಿ; ಎರಡರ ಒಳಗೆ; ಎರಡಕ್ಕೂ ಅಡ್ಡವಾಗಿ; ಎರಡರ – ನಡುವೆ, ಮಧ್ಯೆ; ಎರಡು ರೇಖೆಗಳ ಯಾ ದಾರಿಗಳ ನಡುವೆ.
  2. (ಎರಡು ನಿರ್ದಿಷ್ಟ ಕಾಲ, ಸ್ಥಳ, ಮೊತ್ತ, ಕ್ರಮ, ಸಾಲುಗಳ) ನಡುವೆ; ಮಧ್ಯೆ; ಅಂತರದಲ್ಲಿ; ಒಳಗೆ: between 12 and 1 o’clock 12 ಮತ್ತು 1 ಗಂಟೆಗಳ ನಡುವೆ. between 5 and 6 miles 5 ರಿಂದ 6 ಮೈಲಿ ಒಳಗೆ.
  3. ಬೇರ್ಪಡಿಸುವ; ಪ್ರತ್ಯೇಕಿಸುವ; ನಡುವಣ: an alley-way between two buildings ಎರಡು ಎತ್ತರವಾದ ಕಟ್ಟಡಗಳನ್ನು ಬೇರ್ಪಡಿಸುವ ಸಂದಿ. difference between right and wrong ಸರಿ ಮತ್ತು ತಪ್ಪುಗಳ ನಡುವಣ ವ್ಯತ್ಯಾಸ.
  4. (ಒಂದು) ಕೂಡಿಸುವ; ಸೇರಿಸುವ: air service between cities ನಗರಗಳನ್ನು ಒಂದುಗೂಡಿಸುವ ವಿಮಾನ ವ್ಯವಸ್ಥೆ.
  5. ನಡುವಣ; ಮಧ್ಯಸ್ಥವಾಗಿರುವ; ಎರಡರ ಗುಣ, ಸ್ವರೂಪ ಮೊದಲಾದವನ್ನು ಹೊಂದಿರುವ: between red and blue ಕೆಂಪು ಮತ್ತು ನೀಲಿಗಳಿಗೆ ಮಧ್ಯಸ್ಥವಾಗಿರುವ; ಪೂರ್ತಿ ಕೆಂಪಾಗಲಿ ನೀಲಿಯಾಗಲಿ ಆಗಿರದ.
  6. ಇಬ್ಬರಿಂದಲೂ, ಎರಡರಿಂದಲೂ – ಆದ; ಇಬ್ಬರೂ, ಎರಡೂ – ಸೇರಿ ಮಾಡಿದ: devide (share) the money between you ನೀವಿಬ್ಬರೂ ಸೇರಿ ಹಣವನ್ನು ವಿಭಾಗಮಾಡಿಕೊಳ್ಳಿ.
  7. (ಎರಡು ಸ್ಥಳಗಳ ಯಾ ಇಬ್ಬರ) ನಡುವೆ; ಮಧ್ಯೆ: two letters which passed between a mother and son ತಾಯಿ ಮಗನ ನಡುವೆ ಓಡಾಡಿದ ಎರಡು ಪತ್ರಗಳು.
  8. ಇಲ್ಲಿಂದ ಅಲ್ಲಿಗೆ; ಒಂದೆಡೆಯಿಂದ ಇನ್ನೊಂದೆಡೆಗೆ; ಒಬ್ಬರಿಂದ ಇನ್ನೊಬ್ಬರ ಬಳಿಗೆ: runs between London and Brighton ಲಂಡನ್ನಿನಿಂದ ಬ್ರೈಟನ್ನಿಗೆ ಓಡುತ್ತದೆ.
  9. ಪರಸ್ಪರ; ಒಬ್ಬರನ್ನೊಬ್ಬರು: no love lost between them ಅವರಲ್ಲಿ ಪರಸ್ಪರ ಪ್ರೀತಿಯಿಲ್ಲ.
  10. ಇಬ್ಬರಲ್ಲೇ; ನಮ್ಮಿಬ್ಬರಲ್ಲೇ: between ourselves (ಇತರರಿಗೆ ತಿಳಿಸದೆ) ನಮ್ಮ ನಮ್ಮಲ್ಲೇ. between you and me ನಮ್ಮಿಬ್ಬರಲ್ಲೇ.
  11. ಇಬ್ಬರ, ಎರಡರ – ಪೈಕಿ ಒಬ್ಬನನ್ನು, ಒಂದನ್ನು: choose between them ಇಬ್ಬರಲ್ಲಿ, ಎರಡರಲ್ಲಿ – ಒಬ್ಬನನ್ನು, ಒಂದನ್ನು ಆರಿಸಿಕೊ.
ನುಡಿಗಟ್ಟು
  1. between .....and ಒಟ್ಟು ಸೇರಿದ ಕಾರಣದಿಂದ: my days are fully taken up between reading and writing ಓದು ಬರಹ ಒಟ್ಟು ಸೇರಿ ನನ್ನ ಕಾಲವನ್ನೆಲ್ಲ ತೆಗೆದುಕೊಂಡು ಬಿಟ್ಟಿವೆ.
  2. between cup and lip (ಆಶಾಭಂಗ, ವಿಘ್ನ ಮೊದಲಾದವುಗಳ ವಿಷಯದಲ್ಲಿ) ಕೈಗೂ ಬಾಯಿಗೂ ನಡುವೆ: there is many a slip between the cup and the lip ಕೈಗೆ ಬಂದ ತುತ್ತು ಬಾಯಿಗಿಲ್ಲ.
  3. between the devil and the deep sea ಇತ್ತ ಪುಲಿ ಅತ್ತ ದರಿ; ಉಭಯ ಸಂಕಟಕ್ಕೆ ಸಿಕ್ಕಿ.
  4. between whiles ನಡುನಡುವೆ; ಆಗಿಂದಾಗ್ಗೆ; ಆಗಾಗ; ಮಧ್ಯೆಮಧ್ಯೆ.
  5. between wind and water ಅಪಾಯಕರ – ಸ್ಥಳದಲ್ಲಿ, ಸ್ಥಿತಿಯಲ್ಲಿ, ಸ್ಥಾನದಲ್ಲಿ, ಸನ್ನಿವೇಶದಲ್ಲಿ.
  6. stand between
    1. ಅಡ್ಡಿಯಾಗು; ಅಡ್ಡಿಬರು; ನಡುವೆ ಬರು: how could he stand between us two? ನಮ್ಮಿಬ್ಬರಿಗೆ ಅವನು ಹೇಗೆ ಅಡ್ಡಿಯಾಗುತ್ತಾನೆ? ನಮ್ಮಿಬ್ಬರ ನಡುವೆ ಅವನು ಹೇಗೆ ಬರುತ್ತಾನೆ?
    2. ಮಧ್ಯಸ್ಥಗಾರನಾಗು; ಮಧ್ಯಸ್ಥಗಾರನಾಗಿ ವರ್ತಿಸು.
    3. ರಕ್ಷಕನಾಗು; ರಕ್ಷಕನಾಗಿ – ನಿಲ್ಲು, ವರ್ತಿಸು.