See also 2all  3all  4all
1all ಆಲ್‍
ಗುಣವಾಚಕ
  1. ಎಲ್ಲ; ಇಡೀ; ಸರ್ವ; ಸಕಲ; ಸಮಸ್ತ; ಮೊತ್ತದ; ಸಂಖ್ಯೆಯ ಒಟ್ಟು: all England ಇಡೀ ಇಂಗ್ಲಂಡ್‍. all his life ಅವನ ಜೀವನವೆಲ್ಲ.
  2. ಪೂರ್ತಿ; ಪೂರ್ಣ; ಪೂರಾ; ಸಾಧ್ಯವಾದಷ್ಟೂ ಹೆಚ್ಚಿಗೆ: with all speed ಪೂರ್ತಿ ವೇಗದಿಂದ.
  3. (ಬಹುವಚನದೊಡನೆ) ಎಲ್ಲ; ಒಟ್ಟು; ಅಖಿಲ; ನಿಖಿಲ; ಸಮಸ್ತ: all men ಎಲ್ಲ ಜನರು.
  4. ಯಾವೊಂದೂ; ಎಂಥದೊಂದು; ಎಲ್ಲ; ಯಾವುದೇ; ಏನೇ: beyond all doubts ಯಾವೊಂದು ಸಂಶಯಕ್ಕೂ ಎಡೆಗೊಡದೆ; ಎಲ್ಲ ಸಂಶಯಗಳನ್ನೂ ಮೀರಿ.
ಪದಗುಚ್ಛ
  1. all bountiful ಸರ್ವಸಮೃದ್ಧವಾದ.
  2. All Fools’ Day ಸರ್ವಪೆದ್ದರ ದಿನ; ಏಪ್ರಿಲ್‍ ಒಂದನೆಯ ತಾರೀಖು; ಬೇಹುಷಾರಿಯಾಗಿರುವವರಿಗೆ ನಂಬಿಕೆ ಹುಟ್ಟಿಸಿ, ಮೋಸಮಾಡಿ, ಅನಂತರ ಅವರನ್ನು ಏಪ್ರಿಲ್‍ ಪೆದ್ದರು ಎಂದು ಗೇಲಿಮಾಡುವ ದಿನ.
  3. all fours.
  4. all hail! ಒಳ್ಳೆಯದಾಗಲಿ! ಶುಭವಾಗಲಿ! ಜಯವಾಗಲಿ!
  5. All Hallows = ಪದಗುಚ್ಛ\((11)\).
  6. all hands.
  7. all kind(s) of ಎಲ್ಲ ತೆರನಾದ; ಎಲ್ಲ ಬಗೆಯ; ಎಲ್ಲ ರೀತಿಯ.
  8. all knowing ಎಲ್ಲ ಬಲ್ಲ; ಸರ್ವಜ್ಞ.
  9. all manner of = ಪದಗುಚ್ಛ\((7)\).
  10. all righteous ಸಕಲ ಗುಣಸಂಪನ್ನ.
  11. All Saints’ Day ಸರ್ವಸಂತರ ದಿನ; ನವೆಂಬರ್‍ 1ನೇ ತಾರೀಖು; ಎಲ್ಲ ಸಂತರ ಗೌರವಾರ್ಥವಾಗಿ ಚರ್ಚುಗಳಲ್ಲಿ ಆಚರಿಸುವ ಒಂದು ಹಬ್ಬ.
  12. all seeing ಎಲ್ಲವನ್ನೂ ನೋಡುವ; ಸರ್ವಸಾಕ್ಷಿ.
  13. All Souls’ Day ಸರ್ವಾತ್ಮರ ಯಾ ಸಮಸ್ತ ಆತ್ಮಗಳ ದಿನ; ದೈವಾಧೀನರಾದ ಎಲ್ಲ ಶ್ರದ್ಧಾವಂತ ಆತ್ಮಗಳಿಗೂ ಸದ್ಗತಿ ದೊರೆಯಲೆಂದು ಪ್ರಾರ್ಥಿಸುವ ದಿನ; ನವೆಂಬರ್‍ 2ನೆಯ ತಾರೀಖು.
  14. all sufficient ಸರ್ವ ಸಂಪನ್ನ.
  15. all sufficing ಪೂರ್ತಿ ಸಾಕಾಗುವಷ್ಟು; ಅಗತ್ಯವಾದದ್ದು, ಬೇಕಾದದ್ದು ಸಂಪೂರ್ಣವಾಗಿ ಇರುವ.
  16. all the $^1$time.
  17. all the $^1$way.
  18. all time high ಎಲ್ಲ ಕಾಲಕ್ಕೂ ಗರಿಷ್ಠ.
  19. and all $^1$that.
  20. of all ಎಲ್ಲರ ನಡುವೆ; ಎಲ್ಲರ ಮಧ್ಯೆ; ಎಲ್ಲರಲ್ಲಿ: why ask me to help, of all people ಸಹಾಯ ಮಾಡಲು ಎಲ್ಲರಲ್ಲಿ ನನ್ನನ್ನು ಏಕೆ ಕೇಳುತ್ತೀಯೆ?
  21. stop all this grumbling ಈ ಅತಿ ಗೊಣಗಾಟವನ್ನು ನಿಲ್ಲಿಸು.
ನುಡಿಗಟ್ಟು

get away from it all ದಿನನಿತ್ಯದ ಕಷ್ಟಕೋಟಲೆಗಳನ್ನು ತಲೆಗೆ ಹಚ್ಚಿಕೊಳ್ಳದಿರು.