Christ ಕ್ರೈಸ್ಟ್‍
ನಾಮವಾಚಕ
  1. ಯೆಹೂದ್ಯ–ಉದ್ಧಾರಕ, ರಕ್ಷಕ; ಯೆಹೂದ್ಯರ ಭವಿಷ್ಯೋಕ್ತಿಯಲ್ಲಿ ಹೇಳಿರುವ ದೇವಾಭಿಷಿಕ್ತ.
  2. (ಈ ಪ್ರವಾದಕ್ಕನುಸಾರ ಅವತರಿಸಿದನೆಂದು ನಂಬಲಾದ) ಯೇಸು; ಯೇಸು ಕ್ರಿಸ್ತ.
  3. ಯೇಸುವಿನ ವಿಗ್ರಹ, ಪ್ರತಿಮೆ ಯಾ ಚಿತ್ರ.
  4. ದೇವನಿಯುಕ್ತ ರಾಜ; ದೇವಾಧಿಕೃತ ದೊರೆ; ದೇವರಿಂದ ನೇಮಕಗೊಂಡ ದೊರೆ.
  5. ರಕ್ಷಕ; ಉದ್ಧಾರಕ; ತಾರಕ; ಕಾವ; ಕಾಯುವವ.
  6. ಪ್ರೇರಕ; ಸ್ಫೂರ್ತಿದಾಯಕ.
  7. (Christ!) (ಅಶಿಷ್ಟ) (ಆಶ್ಚರ್ಯ, ಅಸಹನೆ ಮೊದಲಾದವನ್ನು ಸೂಚಿಸುವ ಉದ್ಗಾರ) ದೇವರೆ! ಭಗವಂತ!
ಪದಗುಚ್ಛ

the Christ-child ಬಾಲಕ್ರಿಸ್ತ; ಶಿಶು ಯೇಸು; ಯೇಸು ಕೂಸು.