voluntarism ವಾಲಂಟರಿಸ(ಸ್‍)ಮ್‍
ನಾಮವಾಚಕ
  1. (ಚರಿತ್ರೆ) (ಚರ್ಚು ಮೊದಲಾದವುಗಳ ವಿಷಯದಲ್ಲಿ) ಸ್ವತಂತ್ರತಾ ಸಿದ್ಧಾಂತ; ಸ್ವಯಂಸಹಾಯತತ್ತ ; ಚರ್ಚು ಮತ್ತು ಶಾಲೆಗಳು ಸರ್ಕಾರದಿಂದ ಸ್ವತಂತ್ರವಾಗಿ, ಸ್ವಯಂ ಕೊಡುಗೆಗಳು, ಚಂದಾಹಣಗಳಿಂದಲೇ ನಡೆಯಬೇಕೆಂಬ, ಸ್ವತಂತ್ರತೆಯನ್ನು ಎತ್ತಿಹಿಡಿಯುವ ಸಿದ್ಧಾಂತ.
  2. (ತತ್ತ್ವಶಾಸ್ತ್ರ) ಸಂಕಲ್ಪ ಸಿದ್ಧಾಂತ; ವ್ಯಕ್ತಿಯಲ್ಲಿ ಯಾ ವಿಶ್ವದಲ್ಲಿ ಸಂಕಲ್ಪಶಕ್ತಿಯೇ ಮೂಲಭೂತ ತತ್ತ ವೆಂದು ಪ್ರತಿಪಾದಿಸುವ ಸಿದ್ಧಾಂತ.
  3. (ಒತ್ತಾಯ ಯಾ ಬಲಾತ್ಕಾರಕ್ಕಿಂತ ಸ್ವಯಂ ಪ್ರೇರಿತಕ್ರಿಯೆಯನ್ನೇ ಅವಲಂಬಿಸಬೇಕೆಂದು ಪ್ರತಿಪಾದಿಸುವ) ಸ್ವಯಂಸೇವಾ ಸಿದ್ಧಾಂತ.