union ಯೂನ್ಯನ್‍, ಯೂನಿಅನ್‍
ನಾಮವಾಚಕ
  1. ಒಕ್ಕಟ್ಟು; ಒಕ್ಕೂಟ; ಐಕ್ಯ; ಸೇರಿಕೆ; ಸಂಯೋಗ: the union of the parts was imperfect ಭಾಗಗಳ ಸೇರಿಕೆ ಅಸಮರ್ಪಕವಾಗಿತ್ತು.
  2. ಮದುವೆ; ವಿವಾಹ (ಸಂಬಂಧ): a happy union ಸುಖವಾದ ವಿವಾಹ ಸಂಬಂಧ.
  3. ಹೊಂದಿಕೆ; ಸಾಮರಸ್ಯ; ಸಾಂಗತ್ಯ; ಮೈತ್ರಿ; ಏಕೀಭಾವ: lived together in perfect union ಸಂಪೂರ್ಣವಾದ ಮೈತ್ರಿಯಿಂದ ಒಂದಾಗಿ ಜೀವನ ನಡೆಸಿದರು.
  4. (ವಿವಿಧ ಭಾಗಗಳು ಸೇರಿ ರಚಿತವಾಗಿರುವ) ರಾಜಕೀಯ ಒಕ್ಕೂಟ:
    1. (ಮುಖ್ಯವಾಗಿ) ಅಮೆರಿಕದ ಸಂಯುಕ್ತ ಸಂಸ್ಥಾನಗಳು.
    2. ಗ್ರೇಟ್‍ ಬ್ರಿಟನ್‍ ಮತ್ತು ಉತ್ತರ ಐರ್ಲೆಂಡು.
    3. ದಕ್ಷಿಣ ಆಹ್ರಿಕದ ಒಕ್ಕೂಟ.
    4. ಸೋವಿಯೆಟ್‍ ಒಕ್ಕೂಟ.
  5. (ಗಣಿತ) ಕೂಟ; ಎರಡು ಅಥವಾ ಹೆಚ್ಚು ಗಣ (set) ಗಳಿಗೆ ಸೇರಿದ ಎಲ್ಲ ಧಾತುಗಳನ್ನೂ ಒಳಗೊಂಡ ಮೊತ್ತ.
  6. ಸಂಘ; ಸಂಘಟನೆ; ಅಂಗಭಾಗಗಳು ಯಾ ಸದಸ್ಯರು ಪರಸ್ಪರ ಕೂಡಿ ರಚಿತವಾದ ಒಕ್ಕೂಟದ ವ್ಯವಸ್ಥೆ.
    1. (ಚರಿತ್ರೆ) ಪ್ಯಾರಿಷ್‍ ಕೂಟ; ಸಂಯುಕ್ತ ಪ್ಯಾರಿಷ್‍; ನಿರ್ಗತಿಕರ ಜೀವನಾಧಾರ ಕಾನೂನುಗಳ ನಿರ್ವಾಹಕ್ಕಾಗಿ ಒಂದುಗೂಡಿಸಿದ ಹಲವು ಪ್ಯಾರಿಷ್‍ಗಳು.
    2. ಇಂಥ ಸಂಯುಕ್ತ ಪ್ಯಾರಿಷ್‍ ಸ್ಥಾಪಿಸಿದ ಊ-ವಸತಿ ಒದಗಿಸುವ, ನಿರ್ಗತಿಕರ ಆಲಯ; ಅನಾಥಾಲಯ.
  7. (ಬ್ರಿಟಿಷ್‍ ಪ್ರಯೋಗ) (ಸಹಕಾರಕ್ಕಾಗಿ) ಒಂದುಗೂಡಿಸಿದ ಚರ್ಚುಗಳ ಕೂಟ.
    1. (ವಿಶ್ವವಿದ್ಯಾನಿಲಯದ ಯಾ ಕಾಲೇಜಿನ) ವಿದ್ಯಾರ್ಥಿ ಸಂಘ ಯಾ ಚರ್ಚಾಸಂಘ: the debate at the Oxford union ಆಕ್ಸ್‍ಹರ್ಡ್‍ ವಿದ್ಯಾರ್ಥಿಸಂಘದಲ್ಲಿ ನಡೆದ ಚರ್ಚಾಕೂಟ.
    2. ಇಂಥ ಸಂಘದ ವಸತಿ ಕಟ್ಟಡಗಳು.
  8. ಗ್ರೇಟ್‍ ಬ್ರಿಟನ್ನಿನ ಧ್ವಜದಲ್ಲಿ (ರೂಢಿಯಾಗಿ ಧ್ವಜಸ್ತಂಭದ ಮಗ್ಗುಲಿನ ಮೇಲು ಮೂಲೆಯಲ್ಲಿ ಕಾಣುವ) ಒಕ್ಕೂಟ ಚಿಹ್ನೆ.
  9. (ಕೊಳವೆ ಮೊದಲಾದವುಗಳನ್ನು ಸುಲಭವಾಗಿ ಕೂಡಿಸಲು ಯಾ ಬೇರ್ಪಡಿಸಲು ಬಳಸುವ) ಜೋಡಣೆ ಸಲಕರಣೆ; ಸಂಯೋಜಕ. Figure: union
  10. (ಹತ್ತಿ, ಲಿನನ್‍, ರೇಷ್ಮೆ ಯಾ ಸೆಬಉ, ಮೊದಲಾದವುಗಳ) ಮಿಶ್ರ ನೆಯ್ಗೆ ಬಟ್ಟೆ.
    1. ಒಗ್ಗೂಡಿಕೆ; ಸಂಯೋಜನೆ; ಸಂಘಟನೆ; ಒಂದುಗೂಡುವುದು.
    2. ಒಗ್ಗೂಡಿದ ಸ್ಥಿತಿ; ಸಂಯುಕ್ತ ಸ್ಥಿತಿ; ಸಂಘಟಿತ ಸ್ಥಿತಿ.
  11. ವೃತ್ತಿ ಸಂಘ; ವೃತ್ತಿನಿರತರು, ಕಾರ್ಮಿಕರು ತಮ್ಮ ಅಭಿವೃದ್ಥಿ ಮತ್ತು ಹಿತರಕ್ಷಣೆಗಾಗಿ ಏರ್ಪಡಿಸಿಕೊಂಡ ಒಕ್ಕೂಟ.
ಪದಗುಚ್ಛ
  1. the Union
    1. ಸಂಯುಕ್ತ ರಾಜ್ಯ, ರಾಷ್ಟ್ರ; ೧೬೦೩ರಲ್ಲಿ ಇಂಗ್ಲೆಂಡು ಮತ್ತು ಸ್ಕಾಟ್ಲೆಂಡುಗಳ ಒಕ್ಕೂಟ.
    2. ೧೮೦೧ರಲ್ಲಿ ಗ್ರೇಟ್‍ ಬ್ರಿಟನ್‍ ಮತ್ತು ಐರ್ಲೆಂಡುಗಳ ಒಕ್ಕೂಟ.
    3. ೧೭೦೭ರಲ್ಲಿ ಇಂಗ್ಲೆಂಡಿನ ಹಾಗೂ ಸ್ಕಾಟ್ಲೆಂಡಿನ ಪಾರ್ಲಿಮೆಂಟುಗಳ ಒಕ್ಕೂಟ.
  2. union down (ವಿಪತ್ತಿನ ಸೂಚನೆಯಾಗಿ) ಒಕ್ಕೂಟ ಚಿಹ್ನೆ ಕೆಳಗೆ ಬರುವಂತೆ ಹಾರಿಸಿದ ಬಾವುಟ; ತಲೆಕೆಳಗಾಗಿ ಹಾರಿಸಿದ ಬಾವುಟ.